ದೇವ ಬಂದಾ ನಮ್ಮ ಸ್ವಾಮಿ ಬಂದಾನೋ
ದೇವರ ದೇವ ಶಿಖಾಮಣಿ ಬಂದಾನೋ IIಅಪII
ಉರಗಶಯನ ಬಂದ ಗರುಡ ಗಮನು ಬಂದ
ನರಗೊಲಿದವ ಬಂದ ನಾರಾಯಣ ಬಂದ II1 II
ಮಂಧರೋದ್ಧರ ಬಂದ ಮಾ ಮನೋಹರ ಬಂದ
ವೃಂದಾವನ ಪತಿ ಗೋವಿಂದ ಬಂದಾನೋ II2II
ನಕ್ರ ಹರನು ಬಂದ ಚಕ್ರಧರನು ಬಂದ
ಅಕ್ರರ ಗೊಲಿದ ತ್ರಿವಿಕ್ರಮ ಬಂದನೋ II3 II
ಪಕ್ಷಿವಾಹನ ಬಂದ ಲಕ್ಷ್ಮಣಗ್ರಜ ಬಂದ
ಅಕ್ಷಯಫಲದ ಶ್ರೀಲಕ್ಷ್ಮೀ ರಮಣ ಬಂದನೋII 4II
ನಿಗಮಗೋಚರ ಬಂದ ನಿತ್ಯ ತೃಪ್ತನು ಬಂದ
ನಗೆಮುಖ ಪುರಂದರ ವಿಠ್ಠಲ ಬಂದನೋ II5 II
Audio Link:http://www.kannadaaudio.com/Songs/Devotional/Enna-Paaliso-Karunakara-Pt-Bhimsen-Joshi/Deva-Bandha-Namma.ram
No comments:
Post a Comment