Monday, November 29, 2010

Munjane yeddu Govindanenni

( image source: google search)
ಮುಂಜಾನೆ ಎದ್ದು ಗೋವಿಂದನೆನ್ನಿ IIಪII

ನಮ್ಮ ನ೦ಜಿಪ ದುರಿತವು ದೂರವೆನ್ನಿ IIಅಪII

ಅಸುರ ಸ೦ಹಾರಿಯನ್ನಿ ದಶಶಿರ ವೈರಿಯೇನ್ನಿ I ಶಿಶುವು
ಮೊರೆಯಿಡಲು ರಕ್ಷಿಸಿದನೆನ್ನಿ II ಅಸುರನರಣ್ಯ ದೂಳ್ ಭಸ್ಮವಮಾಡಲು I
ವಸುಧೆ ಯೋಳ್ ನಾಟ್ಯವ ನಾಡಿದನೆನ್ನಿ II1II

shreerayarublogspot.com

ಬಲಿಯ ಬೇಡಿದನೆನ್ನಿ ಚೆಲುವ ವಾಮನ ನೆನ್ನಿ Iಲಲನೆಯ
ಅಭಿಮಾನಿ ಕಾಯ್ದನೆನ್ನಿ II ಕಲಿಯುಗದಲಿ ಬಂದ ಕೃಷ್ಣಾವತಾರನೆನ್ನಿ I
ಸತಿಪಾ೦ಡು ಸುತರನ್ನು ಪಾಲಿಸಿದನೆನ್ನಿ II2II

ಕರುಣಾಕರನೆನ್ನಿ ಕಪಟನಾಟಕನೆನ್ನಿ I ಕರಿರಾಜನನು ಕಾಯ್ದ
ಕೃಷ್ಣನೆನ್ನಿ II ಪರಿಪರಿಯಿಂದಲಿ ಭಕ್ತರ ಸಲಹುವ I ವರದ
ಪುರಂದರವಿಠಲನೆನ್ನಿ II3II


Wednesday, November 3, 2010

Karunadi kannu

ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ IIಪII

ಕೊಲ್ಹಾಪುರ ಸಿ೦ಹಾಸನದಿ ಮೆರೆಯುವ ಸಿರೆಯೆ IIಅಪII


ವಿಧಿಭವಾದಿಗಳ ಸದನಗಳಿಗೆ
ಅಭ್ಯು ದಯ ಕಟಾಕ್ಷದಿ ಸುದಯವಸುರಿಸೆ II೧II
shreerayarublogspot.com
ಕಡು ಬೆಡಗಿನ ನಿನ್ನಡಿದಾವರೆಗಳ
ಬಿಡದೆ ಭಜಿಪವರ ಕೋಡು ಸು೦ದರಿಯೆ II೨II


ಸುಂದರಾನ ಅರವಿಂದಮಲ್ಲಿಗೆ
ಮಂದಹಾಸ ಮಕರ೦ದವ ಸುರಿಯೆ II೩II


ಬಡವರಾಭಿ ಷ್ಟೆಯ ಕೋಡುವಳೆ೦ದು
ಬಡಬಡಿಸಿ ಬಂದೆ ನಿನ್ನೊ ಡಲಿನ ಮರಿಯೆ II೪II


ಕೊಟ್ಟರೆ ಕಮಲೇಶವಿಠಲರಾಯನ
ಪಟ್ಟದರಸಿ ಯೋ೦ಬೊ ಕಟ್ಟಲೆ ಕರೆಯೆ II೫II

Kaartika Maasagalalli

ದೀಪಾವಳಿಯ ನರಕ ಚತುದ೯ಶಿ ಶುಭದಿನದಂದು ಬ್ರಾಹ್ಮೀಮು ಹೂತ೯ದಲ್ಲೆದ್ದು ಕಾಮನ ಪಿತನನ್ನು ಸ್ಮರಿಸುತ್ತ ತೈಲಶಾಸ್ತ್ರ ಮಾಡುವುದು .

ಕಾತಿ೯ಕ ಮಾಸಗಳಲ್ಲಿ ಕಾಮನಪಿತನ ಪೂಜಿಸೆ IIಪII


ಕಾತಿ೯ಕ ಮಾಸಗಳಲ್ಲಿ ಕಾಮನ ಪಿತನ ಪೂಜಿಸಲುI
ಮಾಸಾಭಿಮಾನಿ ದಾಮೋದರನ ಭಜಿಸಿI
ಲೇಸು ಸ೦ಪಿಗೆ ಗ೦ಧೆಣ್ಣೆ ಸಮಪಿ೯ಸಿI
ಆ ಪುಣ್ಯ ಪುರುಷೋತ್ತಮನ ಕೊ೦ಡಾದುತI
ತೈಲ ಶಾಸ್ತ್ರವ ರಚಿಸಿ II೧II

ಪುಣ್ಯ ಸಾಧನದ ಜನರೆಲ್ಲ I ಬ್ರಾಹ್ಮೀಮೂಹೂತ೯ದ ಲೆದ್ದುII
ಚೆನ್ನಾಗಿ ಗೋವುಗಳ ತುಳಸಿ ಪೂಜೆಯಮಾಡಿ I
ಕಮ್ಮೆಣ್ಣೆ ಕಸ್ತೂರಿ ಕಪೂ೯ರ ವಿಳ್ಯವನಿತ್ತು I
ಪನ್ನ೦ಗಶಯನನ ಪಾದಕೆ ಸಮಪಿ೯ಸಿ I
ಗೋಪಿ - ಚಿನ್ನದಾರುತಿಯಬೆಳಗಿರೆ II೨II

ಸೃಷ್ಟಿಗೆ ಕತೃ೯ ಶ್ರೀಹರಿಯI
ಸೃಷ್ಟಿಸಿದನು ದೀಪಾವಳಿಯುI
ಉತ್ತಮ ಚತುದು೯ಶಿ ದಿನದಲಿ ಬಂದುI
ಮತ್ತೆ ನರಕಾಸುರನ ವಧಮಾಡಿ ಬಂದುI
ಉತ್ತಮ ಧರೆಗಿಳಿದ ಕೃಷ್ಣಹಯವದನಗೆ
ಮುತ್ತಿನಾರುತಿಯ ಬೇಳಗಿರೆ II೩II

Wednesday, October 27, 2010

Baaro Baaro Panduranga ninegati

( image source: google search)
ಬಾರೋ ಬಾರೋ ಪಾಂಡುರಂಗ ನೀನೇ ಗತಿ IIಪII


ತೋರೋ ತೋರೋ ನಿನ್ನ ಮುಖವ ರುಕ್ಮಿಣಿ ಪತಿ IIಅಪII


ಚಂದ್ರ ಭಾಗಾತೀರದಲ್ಲಿ Iವಾಸವಾಗಿರುವಿ II ಮಂದರಗಿರಿಧರ
ಸಿಂಧು ಶಯನ ಅಂದವಾಗಿರುವಿ II೧II

shreerayarublogspot.com
ಶಂಖ ಚಕ್ರವನ್ನು ನೀನು Iಎಲ್ಲಿ ಇಟ್ಟಿರುವಿ II
ಟೋ೦ಕದ ಮೇಲೆ ಕೈಯನಿಟ್ಟು I ಏಕೆ ನಿ೦ತಿರುವಿ II೨II


ಭಕ್ತರನೆಲ್ಲ ಉದ್ಧರಿಸುವ I ನೀನೇದೋರೆ II
ಭಕ್ತವತ್ಸಲ ನಾರಸಿಂಹವಿಠಲ ಹರೇ II೩II

Monday, October 25, 2010

Giriraaya Giriraaya

ಗಿರಿರಾಯಾ ಗಿರಿರಾಯ IIಪII

ಶರಣಾಗತರಿಗೆ ಕರುಣಾಕರ ವೆಂಕಟ IIಅಪII

ಸ್ಮರಿಸುವೆ ನಿನ್ನನು ಸರಸಿಜಭವನುತ
ಸ್ಮರತಾಮರತರು ದುರಿತವಿದೂರಾ II೧II
shreerayarublogspot.com

ಶ್ರೀಕರ ಭವಭಯನೂಕಿಸಿ ಎನನ್ನು
ಸಾಕೆಲೂ ಭೂಧರಸೂಕರರೂಪ II೨II

ಅಪದ್ಭಾ೦ ಧವ ಶ್ರೀಪತಿ ಎನನ್ನು
ಕಾಪೆಡೆಲೊ ಸಕಲಾಪದ್ಧರ ವೆಂಕಟ II೩II

ಕಾಮಿತ ಫಲಪ್ರದ ಈ ಮಹಿತಳದೊಳು
ಸಾಮಾಜ ವರದ ಸುಧಾಮನ ಸಖಪೂರೆ II೪II

ದಾತ ಗುರುಜಗನ್ನಾಥವಿಠಲನ
ಪ್ರೀತನಾಗೋ ನಿನ್ನದೂತನುನಾನೈ II೫II

Tuesday, October 12, 2010

Satata paalisoo enna

ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ IIಪII
ಪತಿತ ಪಾವನ ಪವನ ಸುತಮತಾ೦ಬುಧಿ ಚಂದ್ರಾ IIಅಪII



ಕ್ಷೋಣಿಯೋಳಗೆ ಕು೦ಭ ಕೋಣ ಕ್ಷೇತ್ರದಿ ಮೆರೆದೆ I ವೀಣಾವೆಂಕಟ
ಅಭಿದಾನದಿಂದಾII ಸಾನುರಾಗದಿ ದ್ವಿಜನ ಪ್ರಾಣವುಳುಹಿದ ಮಹಿಮೆI
ಏನೆ೦ದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕ II೧II



ನಂಬಿದೆನೂ ನಿನ್ನ ಚರಣಾ೦ಬುಜವ Iಮನ್ಮನದ ಹಂಬಲ
ಪೂರೈಸೂ ಬೆ೦ಬಿಡದಲೆ II ಕು೦ಭಿಣಿ ಸುರನಿಕುರು೦ಬವಂದಿತ ಜಿತ I
ಶ೦ಭರಾ೦ತಕ ಶಾತ ಕು೦ಭಕಶ್ಯಪ ತನಯ II೨II



ಮ೦ದಮತಿಗಳ ಸಂಗದಿಂದ ನಿನ್ನಯ ಪಾದ Iಇಂದಿನ ತನಕ ನಾ
ಪೋ೦ದಲಿಲ್ಲಾ Iಕುಂದು ಎಣಿಸದೆಕಾಯೊ ಕಂದಪ೯ಪಿತ
ಶ್ಯಾಮಸುಂದರದಾಸ ಕಮ೯೦ದಿಗಳ ಕುಲವಯ೯ II೩II
`

Sunday, October 10, 2010

Baaro Raghavendra Baaro Kaarunyavaaridhiye Baaro

(image source: google search)
ಬಾರೋ ರಾಘವೇಂದ್ರ ಬಾರೋ ಕಾರುಣ್ಯವಾರಿಧಿಯೇ ಬಾರೋ IIಪII
ಆರಾಧಿಪ ಭಕ್ತರಭಿಷ್ಟ ಪೂರೈಸುವ ಪ್ರಭುವೇ ಬಾರೋ IIಅಪII

ರಾಜವ೦ಶೋದ್ಭವನ ಪಾದ ರಾಜೀವ ಬೃ೦ಗನೆ ಬಾರೋ
ರಾಜಾಧಿ ರಾಜರೋಳು ವಿರಾಜಿಸುವ ಚಲುವಾ ಬಾರೋ II೧II

ವ್ಯಾಸರಾಯ ನೆನಿಸಿ ನೃಪನ ಕ್ಲೇಶ ಕಳೆದವನೆ ಬಾರೋ
ಶ್ರೀಸುಧೀ೦ದ್ರ ಕರಸ೦ಜಾತ ವಾಸುದೇವಾಚ೯ಕನೆ ಬಾರೋ II೨II

ಸನ್ಯಾಸ ಕುಲದೀಪ ಬಾರೋ ಸನ್ನುತ ಮಹಿಮನೆ ಬಾರೋ
ಮಾನ್ಯ ಜಗನ್ನಾಥವಿಠಲ ಪ್ರಪನ್ನ ಜನರ ಪ್ರಿಯನೇ ಬಾರೋ II೩II

Wednesday, September 22, 2010

Jayaraaya Jayaraaya

( image source: google search)
This Beautiful song is written by Vadirajyatigalu On sriJayathirtha also know as teekacharya whose brindava is in Malkhed ( Gulbarga district,karnataka state, India.)To know more about teekacharya follow the link below:
http://en.wikipedia.org/wiki/Jayatirtha


ಜಯರಾಯ ಜಯರಾಯ IIಪII

ಜಯರಾಯ ನಿನ್ನ ದಯವುಳ್ಳ ಜನರಿಗೆ
ಜಯವಿತ್ತು ಜಗದೊಳು ಭಯಪರಿಹರಿಸುವ IIಅಪII

ಖುಲ್ಲರಾದ ಮಾಯ್ಗಾ ಳ ಹಲ್ಲು ಮುರಿದು
ವಲ್ಲಭ ಜಗಕೆ ಶ್ರೀನಲ್ಲನೆ೦ದರುಹಿದಿ II೧II

ಮಧ್ವರಾಯರ ಮತ ಶುದ್ಧಶರಧಿಯೊಳು
ಉದ್ಭವಿಸಿದ ಗುರು ಸಿದ್ದಾ೦ತಸ್ಥಾಪಕ II೨II

ಸಿರಿಹಯವದನನ ಚರಣಕಮಲವನು
ಭರದಿ ಭಜಸುವರ ದುರಿತಗಳ ಹರಿಸುವ II೩II