Wednesday, August 4, 2010

Sulabha poojeya maadi /ಸುಲಭ ಪೂಜೆಯ ಮಾಡಿ

ಸುಲಭ ಪೂಜೆಯ ಮಾಡಿ ಬಲವಿಲ್ಲದವರು IIಪII
ನಳಿನ ನಾಭನ ಪಾದ ನಳಿನ ಸೇವಕರು IIಅಪII



ಇರುಳು ಹಚ್ಚುವ ದೀಪ ಹರಿಗೆ ನೀರಾಜನವು I ಮರೆಮಾಡುವ
ವಸ್ತ್ರ ಪರಮ ಮಾಡಿಯು II ತಿರುಗಾಡಿ ದಣಿಯುವು ದೆ ಹರಿಗೆ
ಪ್ರದಕ್ಷಿಣೆಯುII ಹೋರಳಿ ಮಲಗುವುದೆಲ್ಲ ಹರಿಗೆ ವ೦ದನೆಯು II೧II

shreerayarublogspot.com

ನುಡಿದ ಮಾತುಗಳೆಲ್ಲ ಕಡಲ ಶಯನನ ಜಪವು Iಮಡದಿ ಮಕ್ಕಳು
ಮತ್ತೆ ಒಡನೆ ಪರಿವಾರ II ನಡುಮನೆಯ ಅ೦ಗಳವು ಉಡುಪಿ ವೈಕು೦ಠಗಳು II
ಎಡಬಲದ ಮನೆಯವರು ಕಡು ಭಾಗವತರು II೨II


ಹೀಗೆ ಅನುದಿನ ತಿಳಿದು ಹಿಗ್ಗುವ ಜನರ ಭವ - ರೋಗ
ಪರಿಹರವು ಮೂಜಗದಿ ಸುಖವು II ಹೋಗುತಿದೆ ಈ ಆಯೂ ಬೇಗದಿಂದಲಿ
ನಮ್ಮ II ಯೋಗಿಶ ಪುರಂದರ ವಿಠಲನ ನೆನೆ ನೆನೆದು II೩II

Audio link:
http://www.kannadaaudio.com/Songs/Devotional/Ille-Vaikunta-Kaaniro-Sri-Vidyabhushana/Sulabha.ram



Friday, April 30, 2010

sharanara surubhuja Gururaaja

ಶರಣರ ಸುರ ಭೂಜ ಗುರುರಾಜ IIಪII

ವರ ಮಂತ್ರಾಲಯ ಪುರಮ೦ದಿರದಿ ತವ ಸು೦ದರ
ಮುನಿ೦ದ್ರಭಾಸ್ಕರಸಮತೇಜ II೧II

ಕಾಮಿತಾಥ೯ಗಳ ಕಾಮಧೇನುವಿನ

ನೇಮ ಮೀರಿಕೊಡುವ ಮಹರಾಜ II೨II
shreerayarublogspot
ಭೇಶಕೋಟಿಸ೦ಕಾಶನಾದ ಕಮ
ಲೇಶವಿಠಲನ ದಾಸನೆ ಸಹಜ II೩II

Sharanara surabhuja Gururaaja IIpaII


varamantralapuramandira tava sundara
munidra bhaskarasamateja II1II

kaamitaathagala kaamadhenuvina
neema miri kooduva maharaaja II2II

bheshakootisamkaashanaada kamalesha
vithlana daasane sahaja II3II

Thursday, April 29, 2010

Esabeku iddu jaisabeeku

ಈಸಬೇಕು ಇದ್ದು ಜೈಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ IIಪII


ತಾಮರಸ ಜಲದ೦ತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ II೧II


ಗೇರು ಹಣ್ಣಿನಲ್ಲಿ ಬೀಜ ಸೇರಿದ೦ತೆ ಸ೦ಸಾರದಿ
ಮೀರಯಾಸೆ ಮಾಡದಲೆ
ಧೀರ ಕೃಷ್ಣನ ಭಕುತರೆಲ್ಲ II೨II


ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಡುವ ಪರಿಯೊಳು
ಮೋಸ ಹೋಗದ್ಹಾ೦ಗೆ ಜಗ
ದೀಶ ಪುರಂದರವಿಠಲನ ನೆನೆದು II೩II

Tuesday, April 27, 2010

Manava janma doddadu

ಮಾನವ ಜನ್ಮ ದೊಡ್ಡದು ಅದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ IIಪII

ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಹುಚ್ಚರಾಗುವರೆ ( ಮರುಳಾಗುವರೆ)
ಹೆಣ್ಣು ಮಣ್ಣಿಗಾಗಿ ಹರಿಯನಾಮಾಮೃತ
ಉಣ್ಣದೆ ಉಪವಾಸ ಇರುವರೇ ಖೋಡಿ II೧II

ಕಾಲನ ದೂತರು ಕಾಲ್ಪಿಡಿದೆಳೆವಾಗ
ತಾಳು ತಾಳೆ೦ದರೆ ತಾಳುವರೆ
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ
ಹಾಳು (ಸುಳ್ಳಿನ ) ಸ೦ಸಾರದ ಸುಳಿಗೆ ಸಿಕ್ಕಲುಬೇಡಿ II೨II

ಏನು ಕಾರಣ ಯದುಪತಿಯನ್ನು ಮರೆತಿರಿ
ಧನಧಾನ್ಯ ಮಕ್ಕಳು ಸಲಹುವರೆ
ಇನ್ನಾದರು ಏಕೋಭಾವದಿ ಭಜಿಸಿರೋ
ಚೆನ್ನ ಪುರಂದರವಿಠಲರಾಯನ II3II


Maanava janma doddadu ada
haani maadalu beedi hucchappa galira

kannu kaikaal kiwi naalige iralikke
mukki huccharaaguvare ( marulaaguvare)
hennu mannigaagi hariyanaamamruta
unnade upavaasa iruvare khodi

kaalana dootaru kalpididelevaaga
taalu taalendare taaluvare
dhalibaarada munna dharmagalisiroo
haalu ( sullina) samsaarada sulige sikkalu beedi

eenu kaarana yadupatiyannu maretiri
dhanadhanya makkalu salahuvare
innadaru ekoobhaavadi bhajisiroo
chenna purandaravithalaraayana


Yaare Rangana Yaare Krishnana

ಯಾರೇ ರಂಗನ ಯಾರೇ ಕೃಷ್ಣನ
ಯಾರೇ ರಂಗನ ಕರೆಯಬಂದವರು
Yaare rangana yaare krishnana
yaare rangana kareyabandavaru

ಗೋಪಾಲ ಕೃಷ್ಣನ ಪಾಪ ವಿನಾಶನ
ಈ ಪರಿಯಿಂದಲಿ ಕರೆಯಬಂದವರು 1
gopalakrishnana paapavinaashana
eepariyindali kareyabandavaru


ವೇಣು ವಿನೋದನ ಪ್ರಾಣಪ್ರೀಯನ
ಜಾಣೆಯರರಸನ ಕರೆಯಬಂದವರು 2
veenu vinodana pranapriyana
jaaneyararasana kareyabandavaru
shreerayarublogspot
ಕರಿರಾಜವರದನ ಪರಮಪುರುಷನ
ಪುರಂದರವಿಠಲನ ಕರೆಯಬಂದವರು ೩
kariraajavaradana paramapurushana
purandaravithalana kareyabandavaru



Saturday, April 24, 2010

Hari Smarane maadoo

ಹರಿಸ್ಮರಣೆಮಾಡೋ ನಿರ೦ತರ

ಪರಗತಿಗೆ ಇದು ನಿಧಾ೯ರ

ದುರಿತ ಗಜಕ್ಕೆ ಕ೦ಠೀರವನೆನಿಸಿದ
ಶರಣಾಗತ ರಕ್ಷಕ ಪಾವನನಾ II೧II

ಸ್ಮರಣೆಗೈದ ಪ್ರಹಲ್ಲಾದನ ರಕ್ಷಿಸಿದ
ದುರುಳು ಹಿರಣ್ಯಕನುದರವ ಸೀಳಿದII ೨II

ತರುಣಿ ದ್ರೌಪದಿ ಮೂರೆಯಿ ಡಲಾಕ್ಷಣ
ಭರದಿಂದಕ್ಷಯವಿತ್ತ ಮಹಾತ್ಮನ II೩II

shreerayarublogspot

ಅ೦ದು ಅಜಮಿಳ ಕ೦ದನ ಕರೆಯಲು
ಬಂದು ಸಲಹಿ ಆನ೦ದವ ತೋರಿದ II೪II

ಶ್ರೀಪುರಂದರ ವಿಠಲರಾಯನ
ಸೃಷ್ಟಿ ಗೊಡೆಯನ ಮುಟ್ಟಿಭಜಿಸುವ II೫II

Enagu aane Ranga

ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ II1II
shreerayarublogspot
ತನುಮನಧನದಲ್ಲಿ ವ೦ಚಕನಾದರೆ ಎನಗೆ ಆಣೆ ರಂಗ
ಮನಸ್ಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ II2II

ಕಾಕು ಮನುಜರ ಸ೦ಗದಿ ಮಾಡಿದರೆನಗೆ ಆಣೆ ರಂಗ
ಲೌಕೀಕವ ಬಿಡಿಸದಿದ್ದರೆ ನಿನಗೆ ಆಣೆ II3II

ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆII4II

ಹರಿನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೋಲಿಯದಿದ್ದರೆ ನಿನಗೆ ಆಣೆII5II


Enagu aane ranga ninagu aane
enagu ninagu ebbarigu aane

ninna bittu anyara bhajisidarenage aane ranga
enna nii kai bittu poodare ninage aane

tanumanadhanadalli vanchakanaadare enage aane
manassu ninnalli nilisadiddare ninage aane

kaaku manujara sanga maadidarenage aaane ranga
lowkikava bidisadiddare ninage aane

shishtara sangava madadiddare enage aane ranga
dushtara sangava bidisadiddare ninage aane

Hari ninnashraya maadadiddare enage aane ranga
purandaravithala niinooliyadiddare ninage aane

http://www.kannadaaudio.com/Songs/Compilations/Saththavana-Neralu/Enagu-Aane.ram

Friday, April 23, 2010

Dangurava saari

ಡಂಗುರವ (ಸಾರಿರಯ್ಯ ) ಸಾರಿ ಹರಿಯ ಡಿಂಗರೀಗರೆಲ್ಲರೂ ಭೂ
ಮಂಡಲಕ್ಕೆ ಪಾಂಡುರಂಗ ವಿಠ್ಥಲನೆ ಪರದೈವ ವೆಂದು

ಹರಿಯು ಮುಡಿದ ಹೋವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ II1II



ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ II2II


shreerayarublogspot

ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀಪುರಂದರವಿಠಲ ಪರದೈವವೆಂದುII3II


Audio Link:
http://www.kannadaaudio.com/Songs/Devotional/SriVidyabhushana/DaasaraKritigalu/DanguravaSaariHariya.ram