Tuesday, April 13, 2010

BIdeno ninghri Srinivaasa

ಬಿಡೆನೋ ನಿನ್ನ೦ಘ್ರಿ ಶ್ರೀನಿವಾಸ
ಎನ್ನ ದುಡಿಸಿಕೊ ಳ್ಳಲೋ ಶ್ರೀನಿವಾಸ
ನಿನ್ನ ನುಡಿಯ ಜೋತೆಲ್ಲೋ ಶ್ರೀನಿವಾಸ
ನನ್ನ ನಡೆ ತಪ್ಪು ಕಾಯೋ ಶ್ರೀನಿವಾಸ II1II


ಬಡಿಯೋ ಬೆನ್ನಲ್ಲಿ ಶ್ರೀನಿವಾಸ
ಎನ್ನ ಒಡಲ ಹೊಯ್ಯದಿರೂ ಶ್ರೀನಿವಾಸ
ನಾ ಬಡವ ಕಾಣೆಲೂ ಶ್ರೀನಿವಾಸ
ನಿನ್ನ ಒಡಲ ಹೂಕ್ಕೆನೂ ಶ್ರೀನಿವಾಸII2 II

ಪಂಜು ಪಿಡಿವೇನೂ ಶ್ರೀನಿವಾಸ
ನಿನ್ನ ಎ೦ಜಲ ಬಳಿದುಂಬೆ ಶ್ರೀನಿವಾಸ
ನಾ ಸಂಜೆ ಉದಯಕೆ ಶ್ರೀನಿವಾಸ
ಕಾಳಜಿಯ ಪಿಡಿವೆ ಶ್ರೀನಿವಾಸ II3II

ಸತ್ತಿಗೆ ಚಾಮರ ಶ್ರೀನಿವಾಸ
ನಾ ನೆತ್ತಿ ಕುಣಿವೇನೂ ಶ್ರೀನಿವಾಸ
ನಿನ್ನ ರತ್ನದಾವಿಗೆ ಶ್ರೀನಿವಾಸ
ನಾ ಹೊತ್ತು ನಲಿವೇನೂ ಶ್ರೀನಿವಾಸ II4II

ಅವರೊಳಿಗವ ಮಾಳ್ಪೆ ಶ್ರೀನಿವಾಸ
ನನ್ನ ಪಾಲಿಸೋ ಬಿಡದೆ ಶ್ರೀನಿವಾಸ
ಹೇಳಿದ೦ತಾಗಲಿ ಶ್ರೀನಿವಾಸ
ನಿನ್ನಗಳಾಗಿವೆ ಶ್ರೀನಿವಾಸ II5II

ನಿನ್ನ ನಾಮ ಹೋಳಿಗೆ ಶ್ರೀನಿವಾಸ
ಕಳ್ಳ ಕುನ್ನಿ ನಾನಾಗಿಹೆ ಶ್ರೀನಿವಾಸ
ಕಟ್ಟಿ ನಿನ್ನವರೋದ್ದರೆ ಶ್ರೀನಿವಾಸ
ನನಗಿನ್ನೂ ಲಜ್ಜೆತಕೆ ಶ್ರೀನಿವಾಸ II6II

ಬೀಸಿ ಕೊಲ್ಲಲವರೆ ಶ್ರೀನಿವಾಸ
ಮುದ್ರೆ ಕಾಸಿ ಚುಚ್ಚುಲವರೆ ಶ್ರೀನಿವಾಸ
ಮಿಕ್ಕ ಘಾಸಿಗ೦ಜೆನಯ್ಯ ಶ್ರೀನಿವಾಸ
ಎ೦ಜಲ ಬ೦ಟ ನಾ ಶ್ರೀನಿವಾಸ II7II

ಹೇಸಿ ನಾನಾದರೆ ಶ್ರೀನಿವಾಸ
ಹರಿದಾಸರೂಳು ಪೊಕ್ಕೆ ಶ್ರೀನಿವಾಸ
ಅವರ ಭಾಷೆಯ ಕೇಳಿಹೆ ಶ್ರೀನಿವಾಸ
ಆ ವಾಸಿಯ ಸೈರಿಸೂ ಶ್ರೀನಿವಾಸ II8II

ತಿ೦ಗ ಳವನಲ್ಲ ಶ್ರೀನಿವಾಸ
ವತ್ಸರ೦ಗಳವನಲ್ಲ ಶ್ರೀನಿವಾಸ
ರಾಜ೦ಗಳ ಸವದಿಪೆ ಶ್ರೀನಿವಾಸ
ಭವ೦ಗಳ ದಾಟುವೆ ಶ್ರೀನಿವಾಸ II9II

ನಿನ್ನವ ನಿನ್ನವ ಶ್ರೀನಿವಾಸ
ನಾನನ್ಯರರಿವೇನೂ ಶ್ರೀನಿವಾಸ
ಅಯ್ಯ ಮನ್ನಿಸೂ ತಾಯಿತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ II10II

Saturday, April 10, 2010

Raaya Baaro

ರಾಯ ಬಾರೋ ತಂದೆ ತಾಯಿ ಬಾರೋ
ನಮ್ಮನ್ ಕಾಯ ಬಾರೋ I
ಮಾಯಿಗಳ ಮದಿ೯ಸಿದ ರಾಘವೇಂದ್ರ ರಾಯ ಬಾರೋII

ವಂದಿಪ ಜನರಿಗೆ ಮಂದಾರ ತರುವಂತೆ
ಕು೦ದದಭಿಷ್ಟ ಸಲಿಸುತಿಪೆ೯ ರಾಯ ಬಾರೋ
ಕು೦ದದಭಿಷ್ಟ ಸಲಿಸುತಿಪೆ೯ ಸರ್ವಜ್ನ
ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ II1II

ಆರು ಮೂರೂ ಏಳು ನಾಲ್ಕು ಎ೦ಟು ಗ್ರಂಥ ಸಾರಾಥ೯
ತೋರಿದಿ ಸವ೯ರಿಗೆ ನ್ಯಾಯದಿಂದ ರಾಯ ಬಾರೋ
ತೋರಿದಿ ಸರ್ವರಿಗಿ ನ್ಯಾಯದಿಂದ ಸರ್ವಜ್ನ
ಸೂರಿಗಳರಸನೆ ರಾಘವೇಂದ್ರ ರಾಯ ಬಾರೋ II2II

ರಾಮಪದ ಸರಸಿ ರುಹ ಭ್ರುಂಗ ಕೃಪಾಪಾಂಗ
ಭ್ರಾಮಕ ಜನರ ಮಾನಭಂಗ ರಾಯ ಬಾರೋ
ಭ್ರಾಮಕ ಜನರ ಮಾನಭಂಗ ಮಾಡಿದ
ಧೀಮ೦ತರೂಡೆಯ ರಾಘವೇಂದ್ರ ರಾಯ ಬಾರೋ II3II



ಭಾಸುರ ಚರಿತನೆ ಭೂಸುರ ವಂದ್ಯನೆ
ಶ್ರೀ ಸುಧೀ೦ದ್ರಾಯ೯ರ ವರಪುತ್ರಾ ರಾಯ ಬಾರೋ
ಶ್ರೀ ಸುಧೀ೦ದ್ರಾಯ೯ರ ವರಪುತ್ರಾ ನೆನೆಸಿದೆ
ದೈಶಿಕರೊಡೆಯ ರಾಘವೇಂದ್ರ ರಾಯ ಬಾರೋ II4II

ಭೂತಳ ನಾಥನ ಭೀತಿಯ ಬಿಡಿಸಿದ
ಪ್ರೇತತ್ವ ಕಳೆದ ಮಹಿಷಿಯಾ ರಾಯ ಬಾರೋ
ಪ್ರೆತತ್ವ ಕಳೆದ ಮಹಿಷಿಯಾ ಮಹಾ ಮಹಿಮ
ಜನನ್ನಾಥ ವಿಠಲನ ಪ್ರೀತಿಪಾತ್ರ ರಾಯ ಬಾರೋ II5II



Audio Link:
http://www.kannadaaudio.com/Songs/Devotional/Raaya-Baaro-Raghavendra-Baaro/Raaya-Baaro.ram

Tuesday, April 6, 2010

Baaro Namma manege sriRaghavendra

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ IIಪII

ಬಾರೋ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು IIಅ II

ಬಾಲಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀನರಹರಿ ಕಾಲರೂಪವ ತೋರ್ದೆ II೧II

ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ II೨ II

ಮಂತ್ರಗೃಹದಲಿ ನಿಂತ ಸುಯತಿವರ್ಯ
ಅಂತ ತಿಳಿಯದೊ ನೀ ಅಂತರದೊಳು II೩ II

ಭೂತಪ್ರೇತಗಳನು ಘಾತಿಸಿ ಬಿಡುವಂಥ
ಖ್ಯಾತಿಯುತ ಯತಿನಾಥನೆ ತುತಿಸುವೆ II೪II

ಕುಷ್ಟರೋಗಾದಿಗಳು ನಷ್ಟ ಮಾಡುವಂಥ
ಅಷ್ಟಮಹಿಮೆಯುತ ಶ್ರೇಷ್ಠಮುನಿಯೆ II೫ II

ಕರೆದರೆ ಬರುವಿಯೆಂಬೋ ಕೀರುತಿ ಕೇಳಿ ನಾ
ಕರೆದೆನೊ ಕರುಣದಿ ಕರ ಪಿಡಿಯೋ II೬ II

ಭಕ್ತವತ್ಸಲನೆಂಬ ಬಿರುದಿನಿಂದಾದರಾ
ಸಕ್ತನ ಮೊರೆ ಕೇಳಿ ಮಧ್ವೇಶವಿಠ್ಠಲದಾಸII ೭II

Baaro Namma Manege SriRaghavendra IIpaII
Baaro dukhapahaara baaro duritadoora
baarayya sanmarga daari tooruva guru IIapa II


Baalaprahaladanaagi khula kashyapuvige
loola SrinaraHari Kaalarupava torde 1

Vyaasanirmita grantha madwakruta bhashyava
besarade oodi mereve VYaasamuniye 2

Mantragruhadali ninta suyativarya
anta tiliyadoo nii antaradooLU 3

Bhutapretagalanu ghatisi Biduvantha
khyatiyuta yatinaathane tutisuve 4

kushtaroogadigalu nashta Maaduvantha
ashtamahimeyuta sheshthamuniye 5

karedare Baruviyemboo kiruti keeli naa
karedenoo karuNadi kara pidiyoo 6

bhktavatsalanemba birudinindaadaraa
saktana moore keeli madhweshviThaladaasa 7


Audio link:
http://www.kannadaaudio.com/Songs/Devotional/home/ShriRaghavendraSwamySuprabhata.php

Sunday, April 4, 2010

Prana baaroo

ಪ್ರಾಣ ಬಾರೋ ಜಗತ್ರಾಣ ಬಾರೋ
ಪ್ರಾಣಿ ಸಕಲ ಕಮ೯ ಮಾಳ್ಪ ಜಾಣ ಬಾರೋ

ಪಂಚ ರೂಪದಿ ಪ್ರಾಪ೦ಚ ವ್ಯಾಪ್ತ ಬಾರೋ
ಹ೦ಚಿಕೇಲಿ ದೈತ್ಯೆಯರ ವ೦ಚಕನೆ ಬಾರೋ II1II

ಪಾಯೂಪಸ್ತಕಮ೯ ಗೈವಾಪಾನ ಬಾರೋ
ವಾಯುವ ನೀ ನಿರೂಧಿಸೆ ಕಾಯ್ವರಾರೋII 2II

ಗೋಣುಮುರಿವ ಭಾರಹೂರುವ ವ್ಯಾನ ಬಾರೋ
ಪ್ರಾಣಪ೦ಚ ವ್ಯೂಹ ಮುಖ್ಯ ವ್ಯಾನ ಬಾರೋ II3 II

ಉದಕ ಅನ್ನಕ್ಕವಕಾ ಶುದಾನ ಬಾರೋ
ಮುದದಿ ಶ್ವಾಸ ಮಂತ್ರ ಜಪ ಜಾಣ ಬಾರೋ II4 II

http://shreerayaru.blogspot.com/

ವೈದಿಕ ಲೌಕಿಕ ಶಬ್ದ ನುಡಿಸೆ ಬಾರೋ
ಊಧ್ವ೯ಗತಿ ದಾತನೆ ಉದಾನ ಬಾರೋ II5II


ಪಾನ ಅನ್ನಗಳ್ಹ೦ಚೆ ಸಮಾನ ಬಾರೋ
ಧ್ಯಾನವಿ೦ತು ಈವ ಮುಖ್ಯ ಪ್ರಾಣ ಬಾರೋII 6II

ಕರುಣಾಸಾಗರ ದೇಹ ವೀಣೆ ಚರಿಸೆ ಬಾರೋ
ಗುರು ಗೋವಿಂದ ವಿಠಲಾಧಿಷ್ತಿತ ಗುರುವೇ ಬಾರೋII 7II

Thursday, April 1, 2010

Hege Baredittu Prachinadali

ಹೇಗೆ ಬರೆದಿತ್ತು ಪ್ರಾಚಿನದಲ್ಲಿ
ಹಾಗೆ ಇರಬೇಕು ಸ೦ಸಾರದಲ್ಲಿ
ಪಕ್ಷಿ ಕೂತಿತು ಅ೦ಗ ಳದಲ್ಲಿ
ಹಾರಿಹೋಯಿತು ಆ ಕ್ಷಣದಲ್ಲಿ
ಆಡುವ ಮಕ್ಕಳು ಮನೆ ಕಟ್ಟಿದರು
ಆಟ ಸಾಕೆ೦ದು ಮುರಿದೂಡಿದರು
ಸ೦ತೆ ನೆರೆದಿತು ನಾನಾ ಪರಿ
ತಿರುಗಿ ಆಯಿತು ತಮ್ಮ ತಮ್ಮ ದಾರಿ
ವಸ್ತಿಕಾರನು ವಸ್ತಿಗೆ ಬಂದ
ಹೊತ್ತಾರೆ ಎದ್ದು ಊರಿಗೆ ಹೋದ
ಈ ಸ೦ಸಾರಮಾಯ ಬಿಡಿಸಿ
ಕಾಯೋ ಪುರಂದರವಿಠಲ II


Hege Baredittu Prachinadalli
Haage irabeku samsaaradalli
Pakshi kootitu angaladalli
haarihooyitu aakshanadalli
aaduva makkalu mane kattidaru
aata saakendu muridoodidaru
sante nereditu naanaa pari
tirugi aayitu tamma tamma daari
vastikaaranu vastige banda
hottare eddu urige hooda
ee samsaaramaaya bidisi
kaayoo PurandaraVithala

Tuesday, March 30, 2010

BIduvenayya Hanuma

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ
ನಾ ಸುಮ್ಮನೆ ಬಿಡುವೇನೇನಯ್ಯIIಪII


ಬಿಡುವೆ ನೇನೂ ಹನುಮ ನಿನ್ನ ಅಡಿಗಳಿಗೆ ಶಿರವ ಕಟ್ಟಿ
ಒಡೆಯನಲ್ಲಿ ಜ್ಞಾನ ಭಕ್ತಿಯನೆನಗೆ
ಕೋಡುವ ತನಕ ಸುಮ್ಮನೆ ನಿನ್ನ IIಅಪII

ಹಸ್ತವನೆತ್ತಿದರೇನು ಹಾರಾಕಾಲನು ಇಟ್ಟರೇನು
ಬೃತ್ಯನು ನಿನ್ನವನು ನಾನು ಹಸ್ತಿವರದನ ತೋರುವ ತನಕ II೧II

ಹಲ್ಲು ಮುಡಿಯ ಕಚ್ಚಿದರೇನು ಅ೦ಜುವೆನೆ ನಿನಗೆ ನಾನು
ಪುಲ್ಲನಾಭಾನಲ್ಲಿ ಎನ್ನ ಮಾನಸ ನೀ ನಿಲ್ಲಿಸೂ ತನಕ II೨ II


ಡೋ೦ಕುಮೋರೆ ಬಾಲವ ತಿದ್ದಿ ಹೋ೦ಕರಿಸಿದರೆ ಅ೦ಜುವನಲ್ಲ
ಕಿ೦ಕರ ನಿನ್ನವನು ನಾನು ಪುರಂದರವಿಠಲನ ತೋರುವ ತನಕII ೩II

BiduvenaYYa Hanuma Biduvenayya
naa summane biduvenenayya II paII
biduve nenoo hanuma ninna Adigalige shirava katti
odeyanalli jnana bhakutiyanenage
kooduva Tanka summane ninna IIapa II

hastavanettidarenu haaraakaalanu ittarenu
brutyanu ninnavanu naana hastivaradana tooruva tanaka II1II

hallu mudiya kacchidarenu anjuvene ninage naanu
pullanaabhnalli enna manasa nii nillisoo tanaka II 2II

donkumoore baalava tiddi h00karisidare anjuvanalla
kinkara ninnavanu naanu purandaravithalana toruva tanaka II 3II

Monday, March 29, 2010

KRISHNASHTAKAM by vadirajayati

Iವಾದಿರಾಜ ಕೃತ ಕೃಷ್ಣಾಷ್ಟಕಮ್I
ಪಾಲಯಾಚ್ಯುತ ಪಾಲಯಾಜಿತ ಪಾಲಯಾ ಕಮಲಾಲಯ
ಪಯಾ ಧೃತಭೂಧರಾಂಬುರುಹೋದರ ಸ್ವಜನೋದರ
ಮಧ್ವಮಾನಸಪದ್ಮಭಾನುಸಮಂ ಸ್ಮರಪ್ರತಿಮಂ ಸ್ಮರ
ಸ್ನಿಗ್ದನಿರ್ಮಲಶೀತಕಾಂತಿಲಸನ್ಮುಖಂ ಕರುಣೋನ್ಮುಖಮ್
ಹೃದ್ಯಕಂಬುಸಮಾನಕಂಧರಮಕ್ಷಯಂ ದುರಿತಕ್ಷಯಂ
ಸ್ನಿಗ್ದಸಂಸ್ತುತರೂಪ್ಯಪೀಠಕೃತಾಲಯಂ ಹರಿಮಾಲಯಮ್ ೧

ಅಂಗದಾದಿಸಿಶೋಭಿಪಾಣಿಯುಗೇನ ಸಂಕ್ಷುಭಿತೈನಸಂ
ತುಂಗಮಾಲ್ಯಮಣೀಂದ್ರಹಾರಸರೋರಸಂ ಖಲನೀರಸಮ್
ಮಂಗಲಪ್ರದಮಂಥದಾಮವಿರಾಜಿತಂ ಭಜತಾಜಿತಂ
ತಂಗೃಣೇ ವರರೂಪ್ಯಪೀಠಕೃತಾಲಯಂ ಹರಿಮಾಲಯಮ್ ೨

ಪೀನರಮ್ಯತನೂದರಂ ಭಜ ಹೇ ಮನಃ ಶುಭ ಹೇ ಮನಃ
ಸ್ವಾನುಭಾವನಿದರ್ಶನಾಯ ದಿಶಂತಮರ್ಥಿಸುಶಂತಮಮ್
ಅನತೋಸ್ಮಿ ನಿಜಾರ್ಜುನಪ್ರಿಯಸಾಧಕಂ ಖಲಬಾಧಕಂ
ಹೀನೋತೋಜ್ಝಿತರೂಪ್ಯಪೀಠಕೃತಾಲಯಂ ಹರಿಮಾಲಯಮ್ ೩

ಹೈಮಕಿಂಕಿಣಿಮಾಲಿಕಾರಶನಾಂಚಿತಂ ತಮವಂಚಿತಂ
ಕಮ್ರಕಾಂಚನವಸ್ತ್ರಚಿತ್ರಕಟಿಂ ಘನಪ್ರಭಯಾ ಘನಮ್
ನಮ್ರನಾಗಕರೋಪಮೋರುಮನಾಮಯಂ ಶುಭಧಿಮಯಂ
ನೌಮ್ಯಹಂ ವರರೂಪ್ಯಪೀಠಕೃತಾಲಯಂ ಹರಿಮಾಲಯಮ್ ೪

ವೃತ್ತಜಾನುಮನೋಜ್ಞಜಂಘಮಮೋಹದಂ ಪರಮೋಹದಂ
ರತ್ನಕಲ್ಪನಖತ್ವಿಷಾ ಹೃತಹೃತ್ತಮಸ್ತತಿಮುತ್ತಮಮ್
ಪ್ರತ್ಯಹಂ ರಚಿತಾರ್ಚನಂ ರಮಯಾ ಸ್ವಯಾಽಽಗತಯಾ ಸ್ವಯಂ
ಚಿತ್ತ ಚಿಂತಯ ರೂಪ್ಯಪೀಠಕೃತಾಲಯಂ ಹರಿಮಾಲಯಮ್ ೫



ಚಾರುಪಾದಸರೋಜಯುಗ್ಮ ರುಚಾಽಮರೋಚ್ಚಯಚಾಮರೋ-
ದಾರಮೂರ್ಧಜಧಾರಮಂಡಲರಂಜಕಂ ಕಲಿಭಂಜಕಮ್
ವೀರತೋಚಿತಭೂಷಣಂ ವರನೂಪುರಂ ಸ್ವತನೂಪುರಂ
ಧಾರಯಾಽತ್ಮನಿ ರೂಪ್ಯಪೀಠಕೃತಾಲಯಂ ಹರಿಮಾಲಯಮ್ ೬


ಶುಷ್ಕವಾದಿಮನೋಽತಿದೂರತರಾಗಮೋತ್ಸ್ವದಾಗಮಂ
ಸತ್ಕವೀಂದ್ರ ವಚೋವಿಲಾಸಮಹೋದಯಂ ಮಹಿತೋದಯಮ್
ಲಕ್ಷಯಾಮಿ ಯತೀಶ್ವರೈಃ ಕೃತಪೂಜನಂ ಗುಣಭಾಜನಂ
ಧಿಕ್ಕೃತೋಪಮರೂಪ್ಯಪೀಠಕೃತಾಲಯಂ ಹರಿಮಾಲಯಮ್ ೭

ನಾರದಪ್ರಿಯಮಾವಿಶಾಂಬುರುಹೇಕ್ಷಣಂ ನಿಜರಕ್ಷಣಂ
ತಾರಕೋಪಮಚಾರುದೀಪಚಯಾಂತರೇ ಗತಚಿಂತ

ರೇಧೀರ ಮಾನಸ ಪೂರ್ಣಚಂದ್ರಸಮಾನಮಚ್ಯುತಮಾನಮ
ದ್ವಾರಕೋಪಮರೂಪ್ಯಪೀಠಕೃತಾಲಯಂ ಹರಿಮಾಲಯಮ್ ೮

ರೂಪ್ಯಪೀಠಕೃತಾಲಯಸ್ಯ ಹರೇಃ ಪ್ರಿಯಂ ದುರಿತಾಪ್ರಿಯಂ
ತತ್ಪದಾರ್ಚಕವಾದಿರಾಜಯತೀರಿತಂ ಗುಣಪೂರಿತಮ್
ಗೋಪ್ಯಮಷ್ಟಕಮೇತದುಚ್ಚಮುದೇ ಮಮಾಸ್ತ್ವಿಹ ನಿರ್ಮಮ
ಪ್ರಾಪ್ಯ ಶುದ್ಧಫಲಾಯ ತತ್ರ ಸುಕೋಮಲಂ ಹೃತಧೀಮಲಮ್ ೯

ಇತಿ ಶ್ರೀ ವಾದಿರಾಜಯತಿ ವಿರಚಿತಂ ಕೃಷ್ಣಾಷ್ಟಕಮ್

Wednesday, March 24, 2010

Ramashtakam - By srivyasa

ಭಜೇ ವಿಶೇಷ ಸು೦ದರ೦ ಸಮಸ್ತ ಪಾಪ ಖ೦ಡನಮ್
ಸ್ವಭಕ್ತ ಚಿತ್ತರ೦ಜನ೦ ಸದೈವ ರಾಮಮದ್ವಯಮ್ II೧II


ಜಟಾಕಲಾಪ ಶೊಭಿತ೦ ಸಮಸ್ತ ಪಾಪ ನಾಶಕಮ್
ಸ್ವಭಕ್ತ ಭೀತಿ ಭ೦ಜನ೦ ಭಜೇಹ ರಾಮಮದ್ವಯಮ್II ೨II


ನಿಜಸ್ವರೂಪ ಬೋಧಕ೦ ಕೃಪಾಕರ೦ ಭಾವಾಪಹಮ್
ಸಮ೦ ಶಿವ೦ ನಿರ೦ಜನ೦ ಭಜೇಹ ರಾಮಮದ್ವಯಮ್ II೩ II


ಸಪ್ರಪ೦ಚ ಕಲ್ಪಿತ೦ ಹ್ಯನಾಮರುಪ ವಾಸ್ತವಮ್
ನಿರಾಕೃತಿ೦ ನಿರಾಮಯ೦ ಭಜೇಹ ರಾಮಮದ್ವಯಮ್ II೪ II


ನಿಶ್ಪ್ರಪ೦ಚ ನಿವಿ೯ಕಲ್ಪ ನಿಮ೯ಲ೦ ನಿರಾಮಯಮ್
ಚಿದೇಕ ರೂಪ ಸ೦ತತ೦ ಭಜೇಹ ರಾಮಮದ್ವಯಮ್ II೫ II


ಭವಾಬ್ದಿ ಪೋತ ರುಪಕ೦ ಹ್ಯಶೇಶ ದೇಹಕಲ್ಪಿತಮ್
ಗುಣಾಕರ೦ ಕೃಪಾಕರ೦ ಭಜೇಹ ರಾಮಮದ್ವಯಮ್ II೬ II


ಮಹಾವಾಕ್ಯ ಬೋಧಕೈವಿ೯ರಾಜಮಾನ ವಾಕ್ಪದೈ:
ಪರಬ್ರಹ್ಮ ವ್ಯಾಪಕ೦ ಭಜೇಹ ರಾಮಮದ್ವಯಮ್ II೭ II


ಶಿವಪ್ರದ೦ ಸುಖಪ್ರದ೦ ಭವ ಚ್ಚಿ ದ೦ ಭ್ರಮಾಪಹಮ್
ವಿರಾಜಮಾನದೈಶಿಕ೦ ಭಜೇಹ ರಾಮಮದ್ವಯಮ್ II೮II


ರಾಮಾಷ್ಟಕ೦ ಪಠತಿ ಯ: ಸುಕರ೦ ಸುಪುಣ್ಯ೦
ವ್ಯಾಸೇನ ಭಾಷಿತಮಿದ೦ ಶೃಣುತೆ ಮನುಷ್ಯ:
ವಿದ್ಯಾ೦ ಶ್ರೀಯ೦ ವಿಪುಲ ಸೌಖ್ಯಮನ೦ತ ಕೀರ್ತಿ೦
ಸ೦ಪ್ರಾಪ್ಯ ದೇಹವಿಲಯೇ ಲಭತೇ ಚ ಮೋಕ್ಷಂ II೯II


IIಇತಿ ಶ್ರೀವ್ಯಾಸವಿರಚಿತ೦ ರಾಮಾಷ್ಟಕ ಸ್ತೋತ್ರಂ ಸ೦ಪೂಣ೯ಮ್II