Sunday, August 9, 2009

Sri satyanarayana swami aarati




जय लक्ष्मीरमणा, श्री जय लक्ष्मीरमणा ।

सत्यनारायण स्वामी, जनपातक हरणा ॥

रत्न जड़ित सिंहासन, अदभुत छवि राजे ।

नारद करत निराजन, घंटा ध्वनि बाजे ॥

प्रगट भये कलि कारण, द्विज को दरश दियो ।

बूढ़ो ब्राह्मण बनकर, कंचन महल कियो ॥

दुर्बल भील कठारो, इन पर कृपा करी ।

चंद्रचूड़ एक राजा, जिनकी विपत्ति हरी ॥

वैश्य मनोरथ पायो, श्रद्धा तज दीनी ।

सो फल भोग्यो प्रभुजी, फिर स्तुति कीनी ॥

भाव भक्ति के कारण छिन-छिन रूप धरयो ।

श्रद्धा धारण कीनी, तिनको काज सरयो ॥

ग्वाल बाल संग राजा, वन में भक्ति करी ॥

मनवांछित फल दीन्हो, दीनदयाल हरी ॥

चढ़त प्रसाद सवाया, कदली फल मेवा ॥

धूप दीप तुलसी से, राजी सत्यदेवा ॥

सत्यनारायण की आरति, जो कोइ नर गावे ।

कहत शिवानंद स्वामी, वांछित फल पावे ॥


In English:

Jai Lakshmiramana, Shri Jay Lakshmiramana,

Satyanarayan Svaami, Janapaatak Harana.

Ratn Jadit Sinhasan, Adbhut Chavi Raaje,

Naarad Karat Niraajan, Ghanta Dhvani Baaje.

Pragat Bhaye Kali Kaaran, Dvij Ko Darash Diyo

,Budho Braahman Bankar, Kanchan Mahal Kiyo.

Durbal Bhil Kathaaro, In Par Kripa Kari,

Chandrachud Ek Raja, Jinaki Vipati Hari.

Vaishy Manorath Paayo, Shraddha Taj Dini,

So Phal Bhogyo Prabhuji, Phir Stuti Kini.

Bhaav Bhakti Ke Kaaran, Chhin-Chhin Rup Dharyo,

Shraddha Dhaaran Kini, Tinako Kaaj Saryo.

Gvaal Baal Sang Raja, Van Mein Bhakti Kari,

Manavaanchhit Phal Dinho, Dindayaal Hari.

Chadhat Prasaad Savaaya, Kadali Phal Meva,

Dhup Dip Tulasi Se, Raaji Satyadeva.

Satyanarayan Ki Aarati, Jo Koi Nar Gave

,Kahat Shivanand Svami, Vanchhit Phal Pave. OM JAI





Saturday, August 8, 2009

Raghavendra tirtha nita /ರಾಘವೇಂದ್ರ ತೀರ್ಥನೀತ - ರಾಜಿಸುವಾತ

ರಾಘವೇಂದ್ರ ತೀರ್ಥನೀತ ರಾಜಿಸುವಾತ ಪ
ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ IIಅII

ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ - ಬಹಳ
ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ
ಪುಣ್ಯವಂತರಿಂದ ಬಹು ಪೂಜೆಗೊಂಬಾತ - ನಮಗೆ
ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ II೧ II

ಕಾಮಕ್ರೋಧಾದಿಗಳನೆ ಕಾಲಲೊದ್ದಾತ - ಈತ
ವ್ಯೋಮಕೇಶನಂತೆ ನಾಲ್ಕು ವೇದ ಪ್ರಖ್ಯಾತಾ
ಭೂಮಿಯೊಳು ದುರ್ವಾದಿಗಳನೆ ಭೂರಿ ಗೆದ್ದಾತ - ಪ್ರೌಢ
ಶ್ರೀಮಧ್ವಯೋಗೀಂದ್ರತೀರ್ಥ ಶಿಷ್ಯನೆಂಬಾತಾII ೨II

ಸಿಧ್ಧವಿದ್ಯೆಗಳಲಿ ಬಹು ಪ್ರಸಿಧ್ಧನಾದಾತಾ - ನಮ್ಮ
ಮಧ್ವಶಾಸ್ತ್ರಗಳನೆ ಮಾಡಿಕೊಟ್ಟಾತ
ಮಧ್ವೇಶವಿಠ್ಠಲನ ಧ್ಯಾನದಲಿದ್ದಾತ - ತುಂಗ
ಭದ್ರತೀರದಲ್ಲಿ ತಾನು ವಾಸವಾದಾತ II೩II




http://www.kannadaaudio.com/Songs/Devotional/home/EkeVrundaavanidi.php
(The first song in the album)

Friday, August 7, 2009

Aaradhana mahotsava 2009 pictures

These pictures are forwarded to me from Sri Raghavendra swamy community.
Thanks to them and thanks to srs mutt for providing the link.
Thanks to Mr Raghunandan for sharing the picasa link with all of us.

http://picasaweb.google.com/nandana18/Aradhana2009FirstDay#
http://picasaweb.google.com/nandana18/Aradhana2009Day2Shakotsava#
http://picasaweb.google.com/nandana18/Aradhana2009PoorvaAradhanaEvening#
http://picasaweb.google.com/nandana18/Aradhana2009Day3PoorvaAradhana#
http://picasaweb.google.com/nandana18/Aradhana2009Madhyaradhana#
http://picasaweb.google.com/nandana18/Aradhana2009UttaraAradhanaMahaRathotsava#

Yaake mukanadyo guruve

ಯಾಕೆ ಮೂಕನಾದ್ಯೋ -
ಗುರುವೇ ನೀನ್ಯಾಕೆ ಮೂಕನಾದ್ಯೋ IIಪII

ಯಾಕೆ ಮೂಕನಾದ್ಯೋ ಲೋಕಪಾಲಕ ಎನ್ನ
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ IIಅಪII

ಹಿಂದಕ್ಕೆ ನೀ ಎನ್ನ ಮುಂದೆ ಸುಳೀದೀಗ
ಮಂದಿಯೆಂದದಿ ಎನ್ನ ಮಂದನ್ನ ಮಾಡೀಗ II೧II

ಬೇಕಾಗದಿದ್ದರೆ ಯಾಕೆ ಕೈಪಿಡಿದಿ
ಕಾಕುಜನರೊಳೆನ್ನ ನೂಕಿಬಿಟ್ಟು ಈಗ II೨ II

ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಘನ್ನಮಹಿಮನೆ ನೀ ಎನ್ನ ಬಿಟ್ಟು ಈಗ II೩II

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೆ
ಇಂದು ನೀ ಬಿಟ್ಟರೆನ್ನ ಮುಂದೆ ಕಾಯುವರ್ಯಾರೋ II೪II

ಜನ್ಯನು ನಾನೀಗ ಎನ್ನ ಜನಕನು ನೀನು
ಮನ್ನಿಸು ನೀ ನಿತ್ಯ ನನ್ಯಶರಣನಲ್ಲೆ II೫ II

ಈಗ ಪಾಲಿಸದಿರೆ ಯೋಗಿ ಕುಲವರ್ಯ
ರಾಘವೇಂದ್ರನೆ ಭವಸಾಗುವ್ಹಧ್ಯಾಗಯ್ಯII ೬II

ನಾಥನು ನೀನು ಅನಾಥನು ನಾನಯ್ಯ
ಪಾಥೋಜ ಗುರುಜಗನ್ನಾಥ ವಿಠ್ಠಲ ಪ್ರೀಯ II೭ II




Audio link:
http://www.kannadaaudio.com/Songs/Devotional/EkeVrundaavanidi/Yaake.ram





In English:
YaaKe mukanaadyoo
GuRuvee Ni Nyake mukanaadyoo

yaaKe mukanadyaoo lookapaalaka enna
SaaKuvaryaarayya srikara RaGhavendra

Hindakke nii enna munde sulidiga
Mandiyolage enna mandanna maadiga

Bekaagagiddre yaake kai pidi
Kaakujanarolenna nookibittu eega

Ninnatha karunilla ennatha krupanilla
Ghannamahimanee nii enna bittu eea

EnDigaadaru ninna pondikondavanalaa
Indu nii Bittare munde kaayuuvaryaaroo

JAnyanu naaniga enna janakanu niinu
Mannisu nii nitya nanyasharananalle

Eega paalisadire yogi kulavarya
Raghavendrane bhavasaaguhdyagaya

naathaNu niinu Anathanu Naanayya
paaThooja Gurujagannatha VItthala priya

karamugive Gururaya / ಕರಮುಗಿವೆ ಗುರುರಾಯ

ಕರಮುಗಿವೆ ಗುರು ರಾಯ ನೀ
ಹರಸಬೇಕು ವರವಂದ ಬೇಡುವೆನು ನಿಡಲೇ ಬೇಕು

ನಿನ್ನ ಪಾವನ ನಾಮ ಉಸಿರಾಗ ಬೇಕು
ನಿನ್ನ ಸೇವೆಗೆ ಬಾಳು ಮುಡಿಪಾಗಬೇಕು
ನೀ ನಡೆವ ಹಾದಿಯಲಿ ಮಣ್ಣಾಗ ಬೇಕು
ನಿನ್ನ ನೆನಪಲೆ ಮನವು ಹಣ್ಣಾಗ ಬೇಕು

ತುಂಗೆಯ ನೀರಾಗಿ ನಾ ಹರಿಯ ಬೇಕು
ಪಾದದ ಧುಳಾಗಿ ನಾ ನಲಿಯ ಬೇಕು
ಹೇಗಾದರೂ ನಿನ್ನ ನಾ ಸೇರಬೇಕು
ನಿನ್ನಲ್ಲಿ ನನ್ನನು ನಾ ಕಾಣಬೇಕು


Audio Link:
http://www.kannadaaudio.com/Songs/Devotional/Brudavanadali/Karamugive.ram

Yeddu Barutare Noode /ಎದ್ದು ಬರುತಾರೆ ನೋಡೆ

ಎದ್ದು ಬರುತಾರೆ ನೋಡೆ (ಗುರುಗಳು ) ತಾ
ವೆದ್ದು ಬರುತಾರೆ ನೋಡೆ IIಪII

ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆ ಗಳೋಪುತಿವೆ IIಅಪII

ಗಳ ಡೋಲು ಶ್ರೀ ತುಳಸಿ ನಳಿನಾಕ್ಷಿಮಾಲೆ
ಚೆಲುವ ಮುಖದೊಳು ಪೊಳೆವ ದಂತಗಳಿಂದ II೧II

ಹೃದಯ ಮಂದಿರದಲ್ಲಿ ಪದುಮನಾಭನ
ಭಜಿಸಿ ಮುದಮನದಿಂದ ನಿತ್ಯ ಸದಮಾಲರೂಪ ತಾಳಿII ೨II

ದಾತ ಗುರು ಜಗನಾಥ ವಿಠಲನ
ಪ್ರೀತಿಯ ಪಡಿಸುತ ದೂತರ ಪೋರೆಯುತ II೩ II

Audio Link:
http://www.musicindiaonline.com/music/devotional/s/album.8447/language.9/

Thursday, August 6, 2009

Taratamya sangraha / ತಾರತಮ್ಯ ಸಂಗ್ರಹ

ಸತ್ಯ ಜಗಕಿದು ಪಂಚಭೇದವು
ನಿತ್ಯ ಶ್ರೀ ಗೋವಿಂದನ
ಕೃತ್ಯುವರಿತು ತಾರತಮ್ಯದಿ
ಕೃಷ್ಣ ನಧಿಕೆಂದು ಸಾರಿರೆ



ಜೀವ ಈಶಗೆ ಭೇದ ಸರ್ವತ್ರ
ಜೀವ ಜೀವಕೆ ಭೇದವು
ಜೀವ ಜಡ ಜಡ ಜಡಕೆ ಭೇದ
ಜೀವ ಜಡ ಪರಮಾತ್ಮಗೆ II1 II

ಮನುಷೋತ್ತಮನಿಗಧಿಪತಿ ಕ್ಷಿತಿಪರು
ಮನುಜದೇವರು ಗಂಧರ್ವರು
ಜಾನಪಿತ್ರಾಜಾನ ಕರ್ಮಜ
ದಾನವಾರಿತತ್ವಾತ್ಮರುII 2II

ಗಣಪ ಮಿತ್ರರು ಸಪ್ತ ಋಷಿಗಳು
ವಹ್ನಿ ನಾರದ ವರುಣರು
ಇನಜಗೆ ಸಮ ಸೂರ್ಯಚಂದ್ರರು ಮನುಸತಿಯು
ಹೆಚ್ಚುಪ್ರಹವನು II3 II


ದಕ್ಷಸಮ ಅನಿರುದ್ಧ ಗುರು ಶಚಿ ರತಿ
ಸ್ವಾಯಂಭುವರಾವ೯ರು
ಪಕ್ಷ ಪ್ರಾಣನಿಗಿಂತ ಕಾಮನು
ಕಿಂಚಿಧಿಕನು ಇಂದ್ರನು II4 II


ದೇವೇಂದ್ರನಿಗಿ೦ದಧಿಕ ಮಹಾರುದ್ರದೇವ
ಸಮಶೇಷಗರುಡರು
ಕೇವಲಧಿಕರು ಶೇಷಗರುಡಗೆ
ದೇವಿಭಾರತಿ ಸ ರಸ್ವತಿII ೫II

ವಾಯುವಿಗೆ ಸಮರಿಲ್ಲ ಜಗದೊಳು
ವಾಯು ದೇವರೇ ಬ್ರಹ್ಮ್ರುರು
ವಾಯುಬ್ರಹ್ಮ್ರುಗೆ ಕೋಟಿ ಗುಣದಿಂದ ಅಧಿಕ
ಶಕ್ತಳು ಶ್ರೀ ರಮಾ II೬ II

ಅನಂತ ಗುಣದಿಂ ಲಕುಮಿಗಧಿಕನು

ಶ್ರೀ ಪುರಂದರವಿಠಲನು

ಘನ ಸಮರು ಇವಗಿಲ್ಲ ಜಗದೊಳು

ಹನುಮಹೃತ್ವದ್ಮವಾಸಿಗೆ II೭ II

Wednesday, August 5, 2009

Ee pariya sobagaava Devarali /ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ IIಪII
ಗೋಪಿಜನಪ್ರಿಯ ಗೋಪಾಲಗಲ್ಲದೆ IIಅಪ II

ದೊರಯತನದಲಿ ನೋಡೆ ಧರಣಿ ದೇವಿಗೆ ರಮಣ
ಸಿರಿಯ ತನದಲಿ ನೋಡೆ ಶ್ರೀಕಾಂತನು
ಹಿರಿಯ ತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿ ಗುರುವು II೧II

ಪಾವನತ್ವದಿ ನೋಡೆ ಅದುರು ಗಂಗಾಜನಕ
ದೇವತ್ವದಿ ನೋಡೆ ದಿವಿಜರೋಡೇಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಅವಧೈಯ೯ದಿ ನೋಡೆ ಅಸುರಾಂತಕ II೨ II

ಗಗನದಲಿ ಸಂಚರಿಪ ಗಗನ ದೇವನೆ ತುರಗ
ಜಗತಿಧರ ಶೇಷಪಯ೯೦ಕಶನ
ನಿಗಮಗೋಚರ ಪುರಂದರಗಲ್ಲದೆ
ಮಿಗಿಲಾದ ದೈವಗಳಿಗೆ ಭಾಗ್ಯವುಂಟೆ II೩ II