Wednesday, August 5, 2009
Ee pariya sobagaava Devarali /ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ
ಗೋಪಿಜನಪ್ರಿಯ ಗೋಪಾಲಗಲ್ಲದೆ IIಅಪ II
ದೊರಯತನದಲಿ ನೋಡೆ ಧರಣಿ ದೇವಿಗೆ ರಮಣ
ಸಿರಿಯ ತನದಲಿ ನೋಡೆ ಶ್ರೀಕಾಂತನು
ಹಿರಿಯ ತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿ ಗುರುವು II೧II
ಪಾವನತ್ವದಿ ನೋಡೆ ಅದುರು ಗಂಗಾಜನಕ
ದೇವತ್ವದಿ ನೋಡೆ ದಿವಿಜರೋಡೇಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಅವಧೈಯ೯ದಿ ನೋಡೆ ಅಸುರಾಂತಕ II೨ II
ಗಗನದಲಿ ಸಂಚರಿಪ ಗಗನ ದೇವನೆ ತುರಗ
ಜಗತಿಧರ ಶೇಷಪಯ೯೦ಕಶನ
ನಿಗಮಗೋಚರ ಪುರಂದರಗಲ್ಲದೆ
ಮಿಗಿಲಾದ ದೈವಗಳಿಗೆ ಭಾಗ್ಯವುಂಟೆ II೩ II
Sankalpa seva of Sri Raghavendra Swamy

Here is the Link of SANKALPA SEVA OF GURU RAGHAVENDRA SWAMY.
http://www.gururaghavendra1.org/~srsmutt/articles/sankalpa.htm
I thank srs mutt for providing such avaluable information about the Sri Guragala seva and also thanks to gururaghavendra1.org .
Dasara nindisa Beda /ದಾಸರ ನಿಂದಿಸ ಬೇಡ ಮನುಜ
ಹರಿ ದಾಸರ ನಿಂದಿಸ ಬೇಡ IIಪII
ರಾಮನ ನಿಂದಿಸಿ ರಾವಣ
ಕೆಟ್ಟ ವಿಭೀಷಣಗಾಯಿತು ಪಟ್ಟ
ಭೂಮಿಯ ಲೋಭದಿ ಕೌರವ ಕೆಟ್ಟ
ಧರ್ಮಗೆ ರಾಜ್ಯವ ಬಿಟ್ಟ II೧II
ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ
ಸುಡದಲೇ ಬಿಡುವದೇನಣ್ಣ
ಪೋಡವಿಯ ಜನರಿಗೆ ಬಡತನ ಬಂದರೆ
ಬಿರುನುಡಿ ಆಡದಿರಣ್ಣ II೨ II
ದೇವಕಿಯ ಸೇರೆಯನ್ನು ಬಿಡಿಸಿದ ದಾಸರು
ನರರೆನೈ ಈ ಜಗದೊಳು
ಭಾವಜನಯ್ಯ ಭಕುತರ ಸೇವಿಸೆ
ಪಾವನ ಮಾಡೋ ಪುರಂದರ ವಿಠಲ II೩II
Tuesday, August 4, 2009
Jagadoddrana /ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ IIಪII
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದಾII ಅಪII
ನಿಗಮಕೆ ಸಿಲುಕದ ಅಗಣಿತ ಮಹಿಮನ ಮಹಿಮನ
ಮುಗುಗಳ ಮಣಿಕ್ಯನ ಆಡಿಸಿದಳೆಶೋದಾ II1II
ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ II೨ II
ಪರಮ ಪುರುಶನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾII ೩II
Yantrodharaka PranaDevara stotra /ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ

Iಇತಿ ಶ್ರೀವ್ಯಾಸರಾಜಯತಿ ಕೃತ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ ಸಂಪೂರ್ಣಂI
IIಶ್ರೀಕೃಷ್ಣಾರ್ಪಣಮಸ್ತು II
http://www.youtube.com/watch?v=oyWaibj_rHI
( This is the video Link of Yantrodharaka Pranadevara devasthana In Hampi, Karnataka ,India.
One can see the glimpse of Yandtodharaka Pranadevaru)
Bho yati varadrendra /ಭೋ ಯತಿ ವರದೇಂದ್ರ
ಕಾಯೋ ಎನ್ನ ಶುಭಕಾಯ ಭಜಿಸುವೆನು
ಕಾಯೋ ಮಾಯತಮಕೆ ಚಂದ್ರಾ IIಅII
ಕಂಡ ಕಂಡ ಕಡೆಗೆ ತಿರುಗಿ - ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ
ನಿಮ್ಮ ಕಂಡೆ ಕಟ್ಟ ಕಡೆಗೆ II೧II
ನೇಮವು ಎನಗೆಲ್ಲೀ ಇರುವುದು - ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ
ನಿಮ್ಮ ನಾಮವೊಂದೆ ಬಲ್ಲೆ II೨II
ಮಂತ್ರವ ನಾನರಿಯೇ - ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ
ಅನಂತಾದ್ರೀಶ ನಾನರಿಯೆ II೩ II
Audio Link:
http://www.kannadaaudio.com/Songs/Devotional/EkeVrundaavanidi/Bhoyati.ram
Monday, August 3, 2009
Live Telecast of Aaradhna mahotsava 2009.
plase see the information below and click on the link:http://www.srsmutt.org/.
Sunday, August 2, 2009
ಈಶ ನಿನ್ನ ಚರಣ ಭಜನೆ /Eeesha ninna charana Bhajane
ದೋಷರಾಶಿ ನಾಶ ಮಾಡೋ ಶ್ರೀಶ ಕೇಶವ IIಪII
ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ II1 II
ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವII ೨II
ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ II೩II
ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ II೪ II
ಮೊದಲು ನಿನ್ನ ಪಾದ ಪೂಜೆ ಮುದದಿ ಮಾಡುವೆನೈ ನಾನು
ಹೃದಯದೊಳಗೆ ಹುದುಗಿಸಯ್ಯ ಮಧುಸೂಧನII ೫II
ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆಮಾಡು
ಜವನ ಬಾಧೆಯನು ಬಿಡಿಸೋ ತ್ರಿವಿಕ್ರಮ II೬ II
ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥೆ
ನೆಮವೇನಗೆ ಪಾಲಿಸಯ್ಯ ಸ್ವಾಮಿ ವಾಮನ II೭II
ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಒದಗುವಂತೆ
ಹೃದಯದಲ್ಲಿ ಸದನ ಮಾಡೋ ಮುದದಿ ಶ್ರೀಧರ II೮II
ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ ನೀನು ಹಾಕದಿರೋ ಹೃಷಿಕೇಶನೆ II೯ II
ಆಬ್ದೀಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ ಭವದಿ
ಗೆದ್ದು ಪೋಪ ಬುದ್ಧಿ ತೋರೋ ಪದ್ಮನಭಾನೆII ೧೦II
ಕಾಮ ಕ್ರೋಧ ಬಿಡಿಸಿ ನಿನ್ನ ನಾಮ ಜಿವ್ಹೆಯೊಳಗೆ ನುಡಿಸಿ
ಶ್ರೀ ಮಹಾನುಭಾವನಾದ ದಾಮೋದರ II೧೧ II
ಪಂಕಜಕ್ಷಾ ನೀನೆ ಎನ್ನ ಮಂಕು ಬುದ್ಧಿಯನ್ನು ಬಿಡಿಸಿ ನಿನ್ನ
ಕಿಂಕರನ ಮಾಡಿಕೊಳ್ಳೋ ಸಂಕರುಷಣ II೧೨II
ಏಸುಜನ್ಮ ಬಂದರೇನು ದಾಸನಗಲಿಲ್ಲ ನಾನು
ಗಾಸಿಮಾದದಿರೋ ಇನ್ನು ವಾಸುದೇವನೆ II೧೩II
ಬುದ್ಧಿಶೂನ್ಯನಾಗಿ ನಾನು ಕದ್ದುಕಳ್ಳನಾದೆ ಎನ್ನ
ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮನಾನೆ II೧೪ II
ಜನನಿ ಜನಕ ನಿನ್ನೆಯೆಂದು ಎನುವೆನಯ್ಯ ದಿನಬಂದು
ಎನಗೆ ಮುಕ್ತಿ ಪಾಲಿಸಿಂದು ಅನಿರುದ್ದನೆ II೧೫II
ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡೋ ಪ್ರೇಮ
ಇರಿಸು ನಿನ್ನ ಚರಣದಲ್ಲಿ ಪುರುಷೋತ್ತಮ II೧೬II
ಸಾಧುಸಂಗ ಕೊಟ್ಟು ನಿನ್ನ ಪಾದ ಭಜಕನೆನಿಸು ಎನ್ನ
ಭೇದ ಮಾಡಿ ನೋಡದಿರೋ ಅಧೋಕ್ಷದ II೧೭ II
ಚಾರುಚರಣ ತೋರಿ ಎನಗೆ ಪಾರಗಾಣಿಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ ನಾರಸಿಂಹನೆ II೧೮ II
ಸಂಚಿತಾರ್ಥ ಪಾಪಗಳನು ಕಿಂಚಿತಾದರಿಲ್ಲದಂತೆ
ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ್II ೧೯II
ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ
ಹೀನ ಬುದ್ಧಿ ಬಿಡಿಸೋ ಮುನ್ನ ಜನಾರ್ಧನ II೨೦ II
ಜಪತಪಾನುಷಾಠ ನೀನು ವಪ್ಪುವಂತೆ ಮಾಡಲಿಲ್ಲ
ತಪ್ಪು ಕೋಟಿ ಕ್ಷಮಿಸಬೇಕು ಉಪೇಂದ್ರನೆ II೨೧II
ಮೋರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭಾವದ ಎನಗೆ
ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀಹರಿII ೨೨II
ಪುಟ್ಟಿಸಬೇಡವೆನು ಪುಟ್ಟಿಸಿದಕೆ ಪಾಲಿಸೇನು
ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣ II೨೩II
ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವನ
ಅಥಿ೯ಯಿಂದ ಸಲಹುವನು ಕೃತ೯ ಕೇಶವ II೨೪II
ಮರೆತುಬಿಡದೆ ಹರಿಯನಾಮ ಬರೆದು ಓದಿ ಕೇಳಿದವರಿಗೆ
ಕರೆದು ಮುಕ್ತಿ ಕೊಡುವ ಬಾಡದಾದಿಕೇಶವ II೨೫ II