Tuesday, July 19, 2011

SRI RAGHAVENDRA SWAMY AARADHANA MAHOTSAVA 2011 IN USA

II HARI SARVOTTAMA VAYU JEVOTTAMA II
II GURU RAJO VIJAYATHE II







(image source: Google search)




Aaradhana Mahotsava in Newyork:




Please click on above link for Programmes list than click on Sri Raghavendra swamy aaradhana Mahotsava .



Aaradhana Mahotsava in Newjersey:




Sri Krishnavrundavana is celebrating Sri Raghavendra Swamy Aaradhana Mahotsava on 20th Aug 2011. Click o the above link for more detailed information.





Aaradhana Mahotsava in Maryland :







Sri Shiva Vishnu Temple MD is celebrating Sri Raghavendra swamy Aaradhana Mahotsava on 21st August 2011.click on the above link, click on july 2011newsletter for details.










will be updating this post about Aaradhana mahotsava in other cities.

Friday, May 13, 2011

Narasimha mantraondiralu saaku



( image source: google )

ನರಸಿಂಹ ಮಂತ್ರವೊಂದಿರಲು ಸಾಕು I
ದುರಿತ ಕೋಟಿಯ ತರಿದು ಭಾಗ್ಯವನು ಕೊಡುವII

ಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ
ಅಸುರ ಕುಲದವರಿಗೆ ಶತ್ರು ಮಂತ್ರ
ವಸುಧೆಯೊಳು ಪಾದಕಿಗಳಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ II1II


shreerayarublogspot.com


ದಿಟ್ಟ ಧ್ರುವರಾಯನಿಗೆ ಪಟ್ಟಗಟ್ಟಿದ ಮಂತ್ರ
ಶಿಷ್ಟ ವಿಭೀಷಣನ ಪೊರೆದ ಮಂತ್ರ
ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ
ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ II2II

ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ
ಕೊಂಡಾಡೊ ಲೋಕಕೆ ಪ್ರಚಂಡ ಮಂತ್ರ
ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ
ಪುಂಡರೀಕಾಕ್ಷ ಪುರಂದರವಿಠಲ ಮಂತ್ರ II3II

shreerayarublogspot.com

Friday, April 8, 2011

Raama naama bhajisidavage

(image source: google search) ) SRI RAMANAVAMI 12th april 2011 ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ IIಪII ಕಾಮ ಹರನ ಸತಿಯು ಸದಾ ನೇಮದಿಂದ ನೆನೆವ ಶ್ರೀರಾಮ ನಾಮ IIಅಪII ಶಿವನು ಧನ್ಯನಾದ ಮೌನಿI ಯುವತಿ ಪಾವ೯ತಿ ಪಾವನಿ ಯಾದಳುII ರವಿಯ ಸುತನು ವರವ ಪಡೆದ Iಧ್ರುವನು ದಿವಿಜ ನೆನಿಸಿದ II೧II ಕರಿವರ ಪ್ರಹ್ಲಾದ ದ್ರೌಪದಿ Iವರ ವಿಭೀಷಣರೆಲ್ಲರೂ II ಹರಿಯ ನಾಮ ಸ್ಮರಿಸಿ ಸುಖ-I ಭರಿತರಾಗಲಿಲ್ಲವೇ II೨II ಗಿರಜೆ ರಾಮ ಮಂತ್ರದಿಂದ I ಪರಮ ಮಂಗಳೆಯಾದಳು II ವರದ ಗೋಪಾಲ ವಿಠಲ ನಾಮ ದುರಿತಕಾನನ ಪಾವಕ II೩II

Tuesday, February 8, 2011

Madhwarayara Karune

(image source: google search)

ಮಧ್ವರಾಯರ ಕರುಣೆ ಪಡೆಯದವ ಧರೆಯೋಳಗೆ I
ಇದ್ದರೇನು ಇಲ್ಲದಿದ್ದರೇನು IIಪII


ಮಧ್ವಮತವೇ ಮತವು ಸಕಲ ಶೃತಿ ಸಮ್ಮತವು ಮಧ್ವರಾಯರ
ಧ್ಯಾನ ಅಮೃತಪಾನ I ಮಧ್ವರಾಯರ ಲೀಲೆ ನವರತುನದ ಮಾಲೆ I
ಮಧ್ವರಾಯರ ಸ್ಮರಣೆ ಕುಲಕೋಟಿ ಉದ್ಧರಣೆ II೧II


ಮಧ್ವರಾಯರ ಕಥಾ ಕೇಳಲು ದುರಿತಹತ I ಮಧ್ವರಾಯರ ಭಕುತಿ
ಮಾಡೆ ಮುಕುತಿ II ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ I
ಮಧ್ವರಾಯರ ಭಜನೆ ದುಷ್ಕರ್ಮತ್ಯಜನೆ II೨II


ಮಧ್ವರಾಯರ ದಾಸನಾದವನೇ ನಿದೋ೯ಶ Iಮಧ್ವರಾಯರ
ಬಂಟ ಜಗಕೆನೆ೦ಟ II ಮಧ್ವರಮಣ ವಿಜಯವಿಠಲನ ಕಿ೦ಕರರಾದ I
ಮಧ್ವರ ಕಾರುಣ್ಯ ಪಡೆದವನೇ ಧನ್ಯ II3II

Friday, December 31, 2010

Shambho swayambho sambhava


ವಾಮದೇವ ವಿರಿಂಚಿ ತನಯ ಉ
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
ಕಾಮಹರ ಕೈಲಾಸ ಮಂದಿರ
ಸೋಮಸೂರ್ಯಾನಳವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ I




( from Harikathamruthasaara )


ಶ೦ಭೋ ಸ್ವಯ೦ಭುಸ೦ಭವ ನಂಬಿದೆ ಕಾಯೋ
ಜ೦ಭಾರಿನುತ ಅಭ IIಪII




ಅ೦ಬರಪುರಹರ ಸಾ೦ಬ ತ್ರಿಯ೦ಬಕ
ಶ೦ಬರಾರಿರಿಪು ಗ೦ಭೀರ ಕರುಣೇ IIಅಪII





ಭಸಿತಭೂಷಿತ ಶರೀರ ಭಕ್ತರಾಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಪಹಾರ ಪಾವನ್ನಕರ
ತ್ರಿಶೂಲಡಮರುಗಧರ
ನೋಸಲನಯನ ವಿಕಸಿತ ಅ೦ಬುಜಮುಖ
ಶಶಿಧರ ಮೂಕ ರಕ್ಕಸಮದಮದ೯ನ
ಘಸಣೆಗೋಳಿಸುವ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜಪಾದವ ತೋರೋII ೧II

ರಜತಪವ೯ತನಿವಾಸ ನಿಮ೯ಲಭಾಸ
ಗಜದೈತ್ಯ ನಾಶ ಗಿರೀಶ
ಸುಜನರ ಮನೂವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಗೈಸಿದ
ಅಜಗರಮಂದಿರ ಗಜಮುಖ ಜನಕನೆ
ಗಜಗಮನನ ತನುಜನನ್ನು ಕಾಯ್ದವನೆ
ವಜ್ರಮುನಿ ವಂದಿತ ಭಾಜಿಸುವೆ ನಿನ್ನ II೨II

ಮಧುರಾಪುರಿ ನಿಲಯ ಮೃತ್ಯು೦ಜಯ
ಸದಮಲ ಸುಮನಸಗೆಯ
ಸದಾ ನಮಿಪರ ಹೃದಯಸ್ತ ಚಕ್ಕನಾಥ
ಸದೆ ಪಾಪ ಕೊಡು ಅಭಯ
ಸದಾಶಿವ ಜಾನ್ಹವಿಧರ ಕೃತಮಾಲಾ
ನದಿತೀರದಿ ವಾಸವಾಗಿಪ ಸೌಂದರ್ಯ
ಮಧುರಿಪು ವಿಜಯವಿಠಲ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ II೩II




Audio/video link:

http://www.youtube.com/watch?v=EH_lZNjg26M

Parama mangala

(image source : google search)
ಪರಮ ಮಂಗಳ ಮೂರುತಿ ದಿವ್ಯಕಿರುತಿ
ಧರೆಯೋಳಗಿದೆ ವಾರುತಿ IIಪ II


ಕರುಣಾಪಯೋನಿಧಿಯೆ ಕರವಪಿಡಿದು ಎನ್ನ
ಕರುಣಶುದ್ಧನ ಮಾಡೊ ಕರೆವೆ ಮಸ್ತಕ ಬಾಗಿ II೧ II

shreerayarublogspot.com

ರಾಘವೇಂದ್ರರಪಾದ ಲಾಘವಮತಿಯಲ್ಲಿ
ಶ್ಲಾಘನ ಮಾಡಿದ ಮಾಗಧಾರಿಯಪ್ರೀಯ II೨ II


ನಿರುತ ಮಂತ್ರಾಲಯ ಪುರವಾಸ ಅಘನಾಶ
ಸಿರಿ ವಿಜಯವಿಠಲನ್ನಚರಣ ಭಜಿಪಗುಗುವೆ II೩II

Ninna Olumeinda nikhila janaru

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು I
ಮನ್ನಿಸುವರೊ ಮಹಾರಾಯ IIಪII

ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ I

ನಿನ್ನದೇ ಸಕಲ ಸಂಪತ್ತು II ಅಪ II
shreerayarublogspot.com
ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ Iಊರ್ಣ ವಿಚಿತ್ರ

ವಸನಾ II ವರ್ಣವರ್ಣದಿಂದ ಬಾಹೋದೇನೊ ಸಂ -Iಪೂರ್ಣ
ಗುಣಾರ್ಣವ ದೇವಾ II1II

ಸಂಜೀತನಕ ಇದ್ದು ಸಣ್ಣ ಸವಟು ತುಂಬ I ಗಂಜಿ ಕಾಣದೆ I
ಬಳಲಿ -ದೆನೊ II ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ
ಭುಂಜಿಸುವದು ಮತ್ತೇನೋ II2II

ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ I ತಬ್ಬಿಬ್ಬುಗೊಂಡೆ ನಾ ಹಿಂದೆ I
ನಿಬ್ಬರದಲಿ ಸರ್ವರ ಕೂಡಿನ್ನು Iಹಬ್ಬವನುಂಡೆನೊ ಹರಿಯೇ II3II

ಮನೆಮನೆ ತಿರುಗಿದೆ ಕಾಸುಪುಟ್ಟದೆ I ಸುಮ್ಮನೆ ಚಾಲವರಿದು
ಬಾಹೆನೊ II ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ Iಎನಗೆ ಪ್ರಾಪುತಿ
ನೋಡೋ ಜೀಯಾ II4II

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ Iಮೆದ್ದೆನೆಂದರೆ
ಈಯದಾದೆ II ಈ ಧರೆಯೊಳು ಸತ್ಪಾತ್ರರಿಗುಣಿಸುವ I ಪದ್ಧತಿ ನೋಡೊ
ಧರ್ಮಾತ್ಮಾ II5II

ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ I ಚಾಚಿದೆ ನೊಸಲು
ಹಸ್ತಗಳ II ಯೋಚಿಸಿ ನೋಡಲು ಸೋಜಿಗವಾಗಿದೆ I ವಾಚಕೆ ನಿಲುಕದೊ
ಹರಿಯೇ II6II

ವೈದಿಕ ಪದವಿಯ ಕೊಡುವನಿಗೆ ಲೌಕಿಕ Iನೈದಿಸುವುದು
ಮಹಾಖ್ಯಾತಿ II ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ I ಪಾದ
ಸಾಕ್ಷಿ ಅನುಭವವೊ
II7II


Audio link:
http://www.kannadaaudio.com/Songs/Devotional/home/NinnaOlumeinda-RaichurSheshgiridas.php

Monday, November 29, 2010

Munjane yeddu Govindanenni

( image source: google search)
ಮುಂಜಾನೆ ಎದ್ದು ಗೋವಿಂದನೆನ್ನಿ IIಪII

ನಮ್ಮ ನ೦ಜಿಪ ದುರಿತವು ದೂರವೆನ್ನಿ IIಅಪII

ಅಸುರ ಸ೦ಹಾರಿಯನ್ನಿ ದಶಶಿರ ವೈರಿಯೇನ್ನಿ I ಶಿಶುವು
ಮೊರೆಯಿಡಲು ರಕ್ಷಿಸಿದನೆನ್ನಿ II ಅಸುರನರಣ್ಯ ದೂಳ್ ಭಸ್ಮವಮಾಡಲು I
ವಸುಧೆ ಯೋಳ್ ನಾಟ್ಯವ ನಾಡಿದನೆನ್ನಿ II1II

shreerayarublogspot.com

ಬಲಿಯ ಬೇಡಿದನೆನ್ನಿ ಚೆಲುವ ವಾಮನ ನೆನ್ನಿ Iಲಲನೆಯ
ಅಭಿಮಾನಿ ಕಾಯ್ದನೆನ್ನಿ II ಕಲಿಯುಗದಲಿ ಬಂದ ಕೃಷ್ಣಾವತಾರನೆನ್ನಿ I
ಸತಿಪಾ೦ಡು ಸುತರನ್ನು ಪಾಲಿಸಿದನೆನ್ನಿ II2II

ಕರುಣಾಕರನೆನ್ನಿ ಕಪಟನಾಟಕನೆನ್ನಿ I ಕರಿರಾಜನನು ಕಾಯ್ದ
ಕೃಷ್ಣನೆನ್ನಿ II ಪರಿಪರಿಯಿಂದಲಿ ಭಕ್ತರ ಸಲಹುವ I ವರದ
ಪುರಂದರವಿಠಲನೆನ್ನಿ II3II