Friday, October 16, 2009

Sri Ashtalakshmi stotram / ಶ್ರೀ ಅಷ್ಟಲಕ್ಷ್ಮಿ ಸ್ತೋತ್ರಂ

Sri Ashtalakshmi Stotram:




ಸುಮನಸವ೦ದಿತ ಸು೦ದರಿ ಮಾಧವಿ
ಚಂದ್ರ ಸಹೋದರಿ ಹೇಮಮಯೇ
ಮುನಿಗಣಮ೦ಡಿತ ಮೋಕ್ಷ ಪ್ರದಾಯಿನಿ
ಮೋಜುಳಭಾಷಿಣಿ ವೇದನುತೇ
ಪ೦ಕಜವಾಸಿನಿ ದೇವಸುಪೂಜಿತ
ಸದ್ಗುಣ ವಷಿ೯ಣಿ ಶಾಂತಿಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಆದಿ ಲಕ್ಷ್ಮಿ ಸದಾ ಪಾಲಯಮಾಮ್ ೧

ಅಯಿಕಲಿ ಕಲ್ಮಶನಾಶಿನಿ ಕಾಮಿನಿ
ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮ೦ಗಳರೂಪಿಣಿ
ಮಂತ್ರ ನಿವಾಸಿನಿ ಮಂತ್ರನುತೇ
ಮಂಗಳದಾಯಿನಿ ಅ೦ಬುಜವಾಸಿನಿ
ದೇವಗಣಾಶ್ರಿತ ಪಾದನುತೇ
ಜಯ ಜಯ ಹೇ ಮಧುಸೂದನ ಕಾಮಿನಿ
ಧಾನ್ಯ ಲಕ್ಷ್ಮಿ ಸದಾ ಪಾಲಯಮಾಮ್ ೨

ಜಯವರ ವಷಿ೯ಣಿ ವೈಷ್ಣವಿ ಭಾಗ೯ವಿ
ಮಂತ್ರ ಸ್ವರೂಪಿಣಿ ಮಂತ್ರಮಯೇ
ಸುರಗಣಪೂಜಿತ ಶೀಘ್ರ ಫಲಪ್ರದ
ಜ್ಞಾನವಿಕಾಸಿನಿ ಶಾಸ್ತ್ರನುತೇ
ಭವಭಯ ಹಾರಿಣಿ ಪಾಪವಿಮೂಚನಿ
ಸದುಜನಾಶ್ರಿತ ಪಾದಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಧೈಯ೯ ಲಕ್ಷ್ಮಿ ಸದಾ ಪಾಲಯಮಾಮ್ ೩


ಜಯಜಯ ದುಗ೯ತಿನಾಶಿನಿ ಕಾಮಿನಿ
ಸವ೯ಫಲಪ್ರದ ಶಾಸ್ತ್ರಮಯೇ
ರಥಗಜ ತುರಗಪದಾತಿ ಸಮಾವೃತ
ಪರಿಜನಮ೦ಡಿತ ಲೋಕನುತೇ
ಹರಿಹರ ಬ್ರಹ್ಮ ಸುಪೂಜಿತ ಸೇವಿತ
ತಾಪನಿವಾರಿಣಿ ಪಾದಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಗಜಲಕ್ಷ್ಮಿ ರೂಪೇಣ ಸದಾ ಪಾಲಯಮಾಮ್ ೪


ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ
ರಾಗವಿವಧಿ೯ನಿ ಜ್ಞಾನಮಯೇ
ಗುಣಗಣವಾರಿಧಿ ಲೋಕಹಿತೈಶಿಣಿ
ಸ್ವರಸಪ್ತ ಭೂಷಿತ ಗಾನನುತೇ
ಸಕಲ ಸುರಾಸುರ ದೇವಮುನಿಶ್ವರ
ಮಾನವವ೦ದಿತ ಪಾದಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಸ೦ತಾನಲಕ್ಶ್ಮಿ ತ್ವ೦ ಪಾಲಯಮಾಮ್ ೫


ಜಯ ಕಮಲಾಸನಿ ಸದ್ಗತಿದಾಯಿನಿ
ಜ್ಞಾನವಿಕಾಸಿನಿ ಗಾನಮಾಯೇ
ಅನುದಿನಮಚಿ೯ತ ಕು೦ಕುಮಧೂಸರ
ಭುಶಿತ ವಾಸಿತ ವದ್ಯಾನುತೇ
ಕನಕಧಾರಾಸ್ತುತಿ ವೈಭವ ವ೦ದಿತ
ಶ೦ಕರ ದೇಶಿಕ ಮನ್ಯಾಪದೇ
ಜಯ ಜಯ ಹೇ ಮಧುಸೂಧನ ಕಾಮಿನಿ
ವಿಜಯಲಕ್ಷ್ಮಿ ಸದಾ ಪಾಲಯಮಾಮ್ ೬

ಪ್ರಣತ ಸುರೆಶ್ವರಿ ಭಾರತಿ ಭಾಗ೯ವಿ
ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕಣ೯ ವಿಭೂಷಣ
ಶಾಂತಿ ಸಮಾವೃತ ಹಾಸ್ಯಮುಖೇ
ನವನಿಧಿದಾಯಿನಿ ಕಲಿಮಲಹಾರಿಣಿ
ಕಾಮಿತಫಲಪ್ರದ ಹಸ್ತಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ವಿದ್ಯಾ ಲಕ್ಷ್ಮಿ ಸದಾ ಪಾಲಯಮಾಮ್ ೭


ಧಿಮಿಧಿಮಿ ಧಿ೦ಧಿಮಿ ಧಿ೦ಧಿಮಿ ಧಿ೦ಧಿಮಿ
ದು೦ದುಭಿ ನಾದ ಸ೦ಪೊಣ೯ಮಯೇ
ಘಮಘಮ ಘು೦ಘುಮ ಘು೦ಘುಮ ಘು೦ಘುಮ
ಶ೦ಖನಿನಾದ ಸುವಾದ್ಯನುತೇ
ವೈದಿಕಮಾಗ೯ ಪ್ರದಶ೯ಯುತೇ
ಜಯ ಜಯ ಹೇ ಮಧುಸೂಧನ ಕಾಮಿನಿ
ಧನ ಲಕ್ಷ್ಮಿ ರೂಪೇಣ ಸದಾ ಪಾಲಯಮಾಮ್ ೮

ಇತಿ ಶ್ರೀ ಅಷ್ಟಲಕ್ಷ್ಮಿ ಸ್ತೋತ್ರಂ ಸ೦ಪೋಣ೯ಮ


Audio Link:http://www.youtube.com/watch?v=WxpHoZA56N8




Thursday, October 15, 2009

Parvathi Paalisenna

ಪಾರ್ವತಿ ಪಾಲಿಸೆನ್ನ ಮಾನಿನಿರನ್ನೇ
ಪಾರ್ವತಿ ಭಕುತರ ಸಾರಥಿ ವ೦ದಿಪೆ
ಸುರಪತಿ ಗಜಮುಖ ಮೂರುತಿ ಮಾತೆ IIಅಪII

ಮನಕಭಿಮಾನಿಯೀ ನೆನೆವೆನು ನಿನ್ನನು
ಅನುಗ್ರಹಿಸೆನ್ನನು ಅ೦ಬುಜಪಾಣೀ II೧II

ಮ೦ಗಳೆ ಮೃಢನ೦ತರ೦ಗಳೆ ಹರಿಪದ
ಬೃ೦ಗಳೆ ತು೦ಗಳೆ ಪನ್ನ೦ಗವೇಣಿ II೨II

ಗುಣಪೂಣ೯ ವೇಣುಗೋಪಾಲ ವಿಠಲನ್ನ
ಕಾಣಿಸಿ ಕೋಡುವ೦ಥ ಶುಲಿಯ ರಾಣಿ II೩II



In English:

Parvathi paalisenna maaniniranne
Parvathi bhakutara saarathi vandipe
Surapati gajamukha muuruti maate

Manakabhimaaniyee nenevenu ninnanu
Anugrahisennanu ambujapaani

Mangale mrudhanatarangale haripada
Brungale tungale panngaveeni

Gunapurna venugopaalavitthalanna
Kaanisi koduvantha shuliya rani

Saari bhajisiroo

ಸಾರಿ ಭಜಿಸಿರೂ ತಿಕಾರಾಯರ೦ಘ್ರಿಯಾ
ಘೊರಪಾತಕಾ೦ಭುದಿಯ ಪಾರು ಮಾಳ್ಪರ

ವೋದತೀರ್ಥರ ಮತವ ಸಾಧಿಸುವರ
ಪಾದ ಸೇವ್ಯರ ದುಭೊ೯ದ ಕಳೆವರ II೧II

ಭಾಷ್ಯ ತತ್ವವ ವಿಸ್ತಾರ ಮಾಳ್ಪರ
ದೋಷ ದೂರರ ಆದಿಶೇಷ ವೇಷರ II2II

ಶ್ಯಾಮ ಸು೦ದರ ಹರಿಗೆ ಪ್ರೆಮಪೊಣ೯ರ
ನೇಮ ನಿತ್ಯರ ನಿಷ್ಕಮನಾಪರ II೩II

ಮೊಕ್ಷದಾತರ ಅ ಕ್ಷೋಭ್ಯತಿಥ೯ರ
ಸಾಕ್ಷಿ ಇಪ್ಪರ ಅಪೇಕ್ಷರಹಿತರ II೪II

ವಿಜಯವಿಠಲನ ಅ೦ಘ್ರಿಭಜನೆ ಮಾಳ್ಪರ
ಕುಜನಭ೦ಜರ ದಿಗ್ವಿಜಯ ಮಾಳ್ಪರ II೫II



In English:

SaaRi BhajisiRoO TIkaaraayaraghriyaa
GHoraPaatAkaambhudhiya PaaRu Maalpara

Moodatirthara matava saaDhisuvavara
Paada sevyara Durboodha KarLEvara

BHsshya tatwava Vistaara Maalpara
Doosha doorara AadisheShaveShara

ShyamaSundara hariya PremaPoRnara
Neema Nityara Nishkarmanaapara

Mokshadaatara akshyobhyatirthara
Saakshieppara apeksharahitara

VIjayaviTThalana AnghribhAjaNe MAlpara
KujanaBhnjara Dgwijaya MalpAra

Vandipe ninage Gananaatha

ವ೦ದಿಪೇ ನಿನಗೆ ಗಣನಾಥ
ಮೊದಲೋ೦ದಿಪೆ ನಿನಗೆ ಗಣನಾಥ
ಬಂದ ವಿಘ್ನ ಕಳೆಯೋ ಗಣನಾಥ

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ
ಸ೦ದ ರಣದಲ್ಲಿ ಗಣನಾಥ

ಮಾಧವ ಆಜ್ಞೆಯಿಂದ ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯ ಗಣನಾಥ

ಮಂಗಳ ಮೂರುತಿ ಗುರು ರಂಗವಿಠಲನ ಪಾದ
ಹಿಂಗದೆ ಪಾಲಿಸೂ ಗಣನಾಥ



In English:

Vandipee ninage gananaatha
Modalondipe ninage gananaatha
Banda vighna kaleyoo gananaatha

Hinde raavananu mamadinda ninna poojisadee
Sanda ranadalli gananaatha

Maadhva aajneyinda poojisida dharmaraya
Saadhisida rajya gananaatha
Mangala muuruti gururangavitthalana paada
Hindage paalisoo gananaatha

Lambodara Lakumikara

ಲ೦ಬೋದರ ಲಕುಮಿ ಕರ ಅ೦ಬಾ ಸುತ ಅಮರ ವಿನುತ

ಶ್ರೀ ಗಣನಾಥ ಸಿ೦ಧುರ ವರ್ಣ ಕರುಣಾ ಸಾಗರ ಕರಿ ವಾದನ II೧II

ಸಿದ್ಧ ಚರಣ ಸೇವಿತ ಸಿದ್ಧಿ ವಿನಾಯಕ ತೇ ನಮೋ II೨II

ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮ ತೇ ನಮೋ ನಮೋII
೩II


LamBodara Lakumi kara Amba suta amara vinuta
Sri GaNanaatha sindhura Varna karunaasaagara Vaadana


Siddha charana sevita siddhivinaayaka tee namoo
Sakalavidya aadi poojita sarvottama tee namoo nammo

Yellaru maaduvudu hotte gaagi

ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಪ
ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ IIಅಪII

ಪಲ್ಲಕ್ಕಿಯ ಹೋರುವುದು ಹೊಟ್ಟೆಗಾಗಿ ದೊಡ್ಡ
ಮಲ್ಲರೋಡನಾಡುವುದು ಹೊಟ್ಟೆಗಾಗಿ
ಸುಳ್ಳಾಗಿ ಪೂಗಳುವುದು ಹೊಟ್ಟೆಗಾಗಿ
ಸಿರಿ ವಲ್ಲಭನ ಧ್ಯಾನವು ಮುಕ್ತಿಗಾಗಿ II೧ II

ದೊರೆತನ ಮಾಡುವುದು ಹೊಟ್ಟೆಗಾಗಿ
ಕರಿ ತುರಗವೇರುವುದು ಹೊಟ್ಟೆಗಾಗಿ
ದುರಿತವ ಮಾಡುವುದು ಹೊಟ್ಟೆಗಾಗಿ
ಸಿರಿ ಹರಿಯ ಭಜಿಸುವುದು ಮುಕ್ತಿಗಾಗಿ II೨II

ಬೆಟ್ಟವ ಹೋರುವುದು ಹೊಟ್ಟೆಗಾಗಿ
ಗಟ್ಯಾಗಿ ಕೂಗುವುದು ಹೊಟ್ಟೆಗಾಗಿ
ದಿಟ್ಟವಾಗಿ ನಮ್ಮ ಶ್ರೀ ಪುರಂದರ
ವಿಠಲನ ಧ್ಯಾನವು ಮುಕ್ತಿಗಾಗಿ II೩ II

Ellaru maaduvudu Hottegaagi
Genu battegaagi
Sisi vallabhana bhajisuvudu muktigaagi

Pallakkiya hooruvudu hottegaagi dodda
Mallarodanaaduvudu hottegaagi
Sullagi poogaluvudu hottegaagi
Sisi vallabhana dhyanavu muktigaagi

Dooretana maaduvudu hottegaagi
Kari turagaveeruvudu hottegaagi
Duritava maaduvudu hottegaagi
Siri hariya bhajisuvudu muuktigaagi

Bettava hooruvudu hottegaagi
Gattyagi kooguvudu hottegaagi
Dittavaagi namma sri purandara
Vitthalana dhyanavu muktigaagi

Wednesday, October 14, 2009

Hyange irabeku samsaradali

ಹ್ಯಾ ೦ಗೆ ಇರಬೇಕು ಸ೦ಸಾರದಲ್ಲಿ
ಹ್ಯಾ೦ಗೆ ಬರೆದಿತ್ತೋ ಪ್ರಾಚಿನದಲ್ಲಿ

ಪಕ್ಷಿ ಅ೦ಗಳದಲ್ಲಿ ಬ೦ದು ಕೋತ೦ತೆ
ಆ ಕ್ಷಣದಲ್ಲಿ ಹಾರಿ ಹೋದ೦ತೆ II೧II

ನಾನಾ ಪರಿಯಲೇ ಸ೦ತೆ ನೆರೆದ೦ತೆ
ನಾನಾ ಪ೦ಥದ ಹಿಡಿದು ಹೋದ೦ತೆ II೨II

ಮಕ್ಕಲಾಡಿ ಮನೆ ಕಟ್ಟಿದ೦ತೆ
ಆಟ ಸಾಕೆ೦ದು ಅಳಸಿ ಪೋದ೦ತೆ II೩II

ವಸತಿಕಾರನು ವಸತಿ ಕ೦ಡ೦ತೆ
ಹೂತ್ತಾರೆ ಎದ್ದು ಹೊರಟು ಹೋದ೦ತೆ II೪II


ಸ೦ಸಾರ ಪಾಶವ ನೀನೆ ಬಿಡಿಸಯ್ಯ
ಕ೦ಸಾರಿ ಪುರ೦ದರವಿಠಲರಾಯ II೫II



In English:
Hyange iraBeku samsaradalli
Hyange bareditto Prachinadalli

Pakshiangaladalli bandu kootante
Aa kshanadalli haari hadante

Naanaa pariyalle santé neredante
Naanaa pathda Hididu hodante

Makkalaadi mane kattidante
Aaata Saakendu alasi poodante

Vasatikaaranu vasatikandante
Hottare eddu horaTu Hotante

Sansaara Paashava neene Bidisayya
Kamsaari purandaravitthalaraaYa

Kande naa Govindana

ಕಂಡೆ ನಾ ಗೋವಿಂದನ
ಪುಂಡರಿಕಾಕ್ಷ ಪಾ೦ಡವ ಪಕ್ಷ ಕೃಷ್ಣನ

ಕೇಶವ ನಾರಾಯಣ ಶ್ರೀ ಕೃಷ್ಣ ನ
ವಾಸುದೇವ ಅಚ್ಯುತಾನ೦ತನ
ಸಾಸಿಸ ನಾಮದ ಶ್ರೀ ಹೃಶಿಕೇಶನ
ಶೇಷಶಯನ ನಮ್ಮ ವಾಸುದೇವ ಸುತನ II೧II

ಮಾಧವ ಮಧುಸೂಧನ ತ್ರಿವಿಕ್ರಮನ
ಯಾದವಕುಲವ೦ದ್ಯನ
ವೇದಾ೦ತ ವೇದ್ಯನ ಇಂದಿರಾರಮಣನ
ಆದಿ ಮೂರುತಿ ಪ್ರಹ್ಲಾದವರದನ II೨ II

ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ರಕ್ಷಕನ
ಕರುಣಾಕರ ನಮ್ಮ ಪುರ೦ದರ ವಿಠಲನ
ನೆರೆ ನ೦ಬಿದೆನು ಬೇಲೂರ ಚೆನ್ನಿಗನ II೩II


In English:
KAnde naa govindana
Pundarikashapaandava paksha KRishnana

Keshava naarayana sri KRishnana
Vaasudeva achyuthaanatana
Saasira naamada srihrushikeshana
Shehsshayana namma vaasudeva sutana

Maadhava madhusudhana trivikramana
Yaadavakulavandyana
Vedaanta vedyana indiraramanana
Aadi muruti prahladana

Purushottma narahari sriKrishnana
sharaNaagata rakshakana
KaruNaakara namma purandaravitthalanaNEre nambidenu beloora chennigana